Ashitha Soodlu

ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.13, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಮ್ಮಾಜೆ, ಕಲ್ಲಬೆಟ್ಟು, ನೆಲ್ಲಿತೀರ್ಥ, ಗುರುಪುರ ಬೆಳ್ತಂಗಡಿಯ ಮಚ್ಚಿನ, ಮುಂಡಾಜೆ, ಹೊಸಂಗಡಿ ಬಂಟ್ವಾಳದ ವಗ್ಗ, ಪುತ್ತೂರಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯದ ಪಂಜ ಮೊರಾರ್ಜಿ ದೇಸಾಯಿ/ ಡಾ. ಬಿ. ಆರ್. ಅಂಬೇಡ್ಕರ್/ ಶ್ರೀಮತಿ. ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ 6ನೇತರಗತಿ ಪ್ರವೇಶಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 6 ರಿಂದ 10ನೇ […]

ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

“ವಿಶ್ವ ಆನೆ ದಿನ” ಚಿತ್ರ ಬಿಡಿಸುವ ಸ್ಪರ್ಧೆ ➤ ಬಹುಮಾನ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು ಆ. 13, 2020ನೇ ಆಗಸ್ಟ್ 12 ರ “ವಿಶ್ವ ಆನೆ ದಿನ” ಪ್ರಯುಕ್ತ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತದ ವತಿಯಿಂದ ಪ್ರಕೃತಿಯಲ್ಲಿ ಆನೆಯ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಬಗ್ಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 15 ವರ್ಷದ ಒಳಗಿನ ಮಕ್ಕಳಿಂದ ಆನೆಯ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿದ್ದು, ಪ್ರವೇಶಾರ್ಥಿಗಳನ್ನು ಸಾಮಾಜಿಕ ಜಾಲತಾಣದ ಮುಖಾಂತರ ಆಹ್ವಾನಿಸಲಾಗಿತ್ತು. ಸ್ಪರ್ಧೆಗೆ ಒಟ್ಟು 1496 ಚಿತ್ರಗಳು ಬಂದಿದ್ದು, ಅವುಗಳಲ್ಲಿ ಅಂತಿಮವಾಗಿ ಎರಡು

“ವಿಶ್ವ ಆನೆ ದಿನ” ಚಿತ್ರ ಬಿಡಿಸುವ ಸ್ಪರ್ಧೆ ➤ ಬಹುಮಾನ ಪ್ರಕಟ Read More »

ಕರಾವಳಿ, ಕರ್ನಾಟಕ

ಹೈಟೆಕ್ ಅಂಗನವಾಡಿ ಕಟ್ಟಡ – “ಅಜ್ಜಿಮನೆ”

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 13 , ಮಕ್ಕಳ ಕಲಿಕೆಯ ಮೊದಲ ಹಂತವಾಗಿರುವ ಅಂಗನವಾಡಿ ಕೇಂದ್ರಗಳು ಪ್ರತಿಭೆಗಳು ಮೊಳಕೆಯೊಡೆಯುವ ತಾಣಗಳು. ಪ್ರತಿಯೊಂದು ಗ್ರಾಮ, ಜನವಸತಿ ಪ್ರದೇಶಗಳಲ್ಲಿರುವ ಈ ಅಂಗನವಾಡಿಗಳು ಇಂದು ಆಯಾ ಪ್ರದೇಶದ ಸರ್ವ ಚಟುವಟಿಕೆಗಳ ಕೇಂದ್ರಸ್ಥಾನಗಳು. ಪೊಲಿಯೋ ಹನಿ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಲಸಿಕೆ ನೀಡಲು, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡಲು, ಸಾರ್ವಜನಿಕರಿಗೆ ವಿವಿಧ ತರಭೇತಿ, ಮಾಹಿತಿ ನೀಡುವ ಕಾರ್ಯಕ್ರಮಗಳು, ಚುನಾವಣಾ ಗುರುತಿನ ಚೀಟಿ ನೀಡಲು, ವಿವಿಧ ಸಣ್ಣ ಮಟ್ಟದ ಸರಕರಿ

ಹೈಟೆಕ್ ಅಂಗನವಾಡಿ ಕಟ್ಟಡ – “ಅಜ್ಜಿಮನೆ” Read More »

ಕರಾವಳಿ, ಕರ್ನಾಟಕ

ಸೆಪ್ಟೆಂಬರ್ ನಿಂದ ಶಾಲೆಗಳ ಪುನರಾರಂಭ ಮಾಡುವುದಿಲ್ಲ ➤ ಸುರೇಶ್ ಕುಮಾರ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಡ್ಯ ಆ.13. ಕೊರೋನಾ ಭೀತಿಯ ನಡುವೆಯೂ  ರಾಜ್ಯದಲ್ಲಿ ಸೆಪ್ಟೆಂಬರ್​​​​​​ನಿಂದ ಶಾಲೆಗಳ ಪುನರಾರಂಭ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಗೊಂದಲಗಳು ಸಹ ಮೂಡಿವೆ. ಇದರ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್​ ಕುಮಾರ್​ ಸ್ಪಷ್ಟೀಕರಣ ನೀಡಿದ್ದಾರೆ.  ಈ ಬಗ್ಗೆ ಮಾತನಾಡಿದ ಅವರು, ಈಗ ನಮ್ಮ ಮುಂದೆ ದೊಡ್ಡ ಸವಾಲು ಇದೆ.  ಮುಂದಿನ ಶೈಕ್ಷಣಿಕ ದಿನಗಳು ಹೇಗೆ ಎಂಬುದನ್ನು ಯೋಚನೆ ಮಾಡುವಂತಾಗಿದೆ. ಸುರೇಶ್ ಕುಮಾರ್ ಶಾಲೆ

ಸೆಪ್ಟೆಂಬರ್ ನಿಂದ ಶಾಲೆಗಳ ಪುನರಾರಂಭ ಮಾಡುವುದಿಲ್ಲ ➤ ಸುರೇಶ್ ಕುಮಾರ್ ಸ್ಪಷ್ಟನೆ Read More »

ಕರ್ನಾಟಕ

ಕಾಸರಗೋಡು: ಅಕ್ರಮ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಕಸ್ಟಮ್ಸ್‌ ಅಧಿಕಾರಿಗಳು

(ನ್ಯೂಸ್‌ ಕಡಬ) ಕಾಸರಗೋಡು, ಆ. 13, ಅಕ್ರಮವಾಗಿ ಕದ್ದೊಯ್ಯುತ್ತಿದ್ದ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಣ್ಣೂರು ವಿಮಾನ ನಿಲ್ದಾಣದಿಂದ ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು, ಮಂಜೇಶ್ವರ ನಿವಾಸಿಗಳಾದ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಂಜೇಶ್ವರದ ಸತ್ತಾರ್ ಹಾಗೂ ಸಮೀರ್ ಎಂದು ಗುರುತಿಸಲಾಗಿದೆ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ರಮ ಚಿನ್ನಾಭರಣಗಳ ಸಾಗಾಟ ಹೆಚ್ಚುತ್ತಿರುವ ಹಿನ್ನಲೆಯಿಂದ ಕಸ್ಟಮ್ಸ್  ಅಧಿಕಾರಿಗಳು ತಪಾಸಣೆಯನ್ನು ತೀವ್ರಗೊಳಿಸಿದ್ದು , ಆಗಸ್ಟ್ 6 ರಂದು ದುಬೈ ನಿಂದ ಬಂದಿದ್ದ ಇಬ್ಬರು ಕಾಸರಗೋಡು ನಿವಾಸಿಗಳಿಂದ

ಕಾಸರಗೋಡು: ಅಕ್ರಮ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಕಸ್ಟಮ್ಸ್‌ ಅಧಿಕಾರಿಗಳು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಾಜಿ ಸಿಎಂ ಸಿದ್ದುಗೆ ಕೊರೋನಾ ನೆಗೆಟಿವ್ ➤ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್

(ನ್ಯೂಸ್ ಕಡಬ) newskadaba.com  ಬೆಂಗಳೂರು, ಆ,12: ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರು ಕೊರೋನಾ ಸೋಂಕಿನಿಂದ ಈಗ ಸಂಪೂರ್ಣ ಗುಣಮುಖ ಆಗಿದ್ದಾರೆ. ಹೀಗಾಗಿ ಇಂದು ಸಂಜೆ 6 ಗಂಟೆ ವೇಳೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಲಿದ್ದಾರೆ. ಕೊರೋನಾ ಚಿಕಿತ್ಸೆಗಾಗಿ ಸಿದ್ದರಾಮಯ್ಯರವರು ಮಣಿಪಾಲ್ ಆಸ್ಪತ್ರೆಗೆ ದಾಖಲಾದರು. ಸಿದ್ದರಾಮಯ್ಯ ರವರಿಗೆ ಕೊರೋನಾ ಜತೆಗೆ ಇತರ ಆರೋಗ್ಯ ಸಮಸ್ಯೆಗಳಿರುವುದರಿಂದ ಎಲ್ಲದಕ್ಕೂ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಸದ್ಯ ಸಿದ್ದರಾಮಯ್ಯರವರು ಕೊರೋನಾದಿಂದ ಗುಣಮುಖರಾಗಿದ್ದಾರೆ. ಎರಡನೇ ಬಾರಿಗೆ ಗಂಟಲು ದ್ರವ ಹಾಗೂ ರಕ್ತ

ಮಾಜಿ ಸಿಎಂ ಸಿದ್ದುಗೆ ಕೊರೋನಾ ನೆಗೆಟಿವ್ ➤ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ Read More »

ಕರಾವಳಿ, ಕರ್ನಾಟಕ

ಬಿಳಿನೆಲೆ ಅಕ್ರಮ ಶೆಡ್‌ ತೆರವಿಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ➤ ಇಂದಿನಿಂದ ರಾತ್ರಿಯೂ ಸತ್ಯಾಗ್ರಹ ಮುಂದುವರಿಕೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com.ಸುಬ್ರಹ್ಮಣ್ಯ,ಆ.13:  ಬಿಳಿನೆಲೆ ಪೇಟೆಯಲ್ಲಿ ನಿರ್ಮಿಸಲಾದ ಅಕ್ರಮ ಶೆಡ್ ನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರಾರಂಬಿಸಿದ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಶೆಡ್‌ ತೆರವಿಗಾಗಿ ಕಳೆದ ಕೆಲ ದಿನಗಳಿಂದ ಮುಸುಕಿನ ಗುದ್ದಾಟ ನಡೆಸುತ್ತಿರುವ ಅಂಗಡಿ ಮಾಲಕರು ಶೆಡ್ ತೆರವುಗೊಳಿಸುವಲ್ಲಿವರೆಗೆ ಸತ್ಯಾಗ್ರಹ ಮುಂದುವರಿಸಲಾಗುವುದು ಹಾಗೂ ಯಾವುದೇ ಅನಾಹುತಗಳು ನಡೆದಲ್ಲಿ ಅಧಿಕಾರಿಗಳೇ ಹೊಣೆ ಎಂದು ಸತ್ಯಾಗ್ರಹ ನಿರತರು ತಿಳಿಸಿದ್ದಾರೆ. ಅನ್ನಪೂರ್ಣ ಹಾಗೂ ಅವರ ಪತಿ ಗಿರಿಯಪ್ಪ, ಮಕ್ಕಳಾದ ಚೇತನ್ , ಚೇತಕ್ ಅವರು ಬಿಳಿನೆಲೆ ಗ್ರಾಮ ಪಂಚಾಯತ್ ಜಗಲಿಯಲ್ಲಿ

ಬಿಳಿನೆಲೆ ಅಕ್ರಮ ಶೆಡ್‌ ತೆರವಿಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ➤ ಇಂದಿನಿಂದ ರಾತ್ರಿಯೂ ಸತ್ಯಾಗ್ರಹ ಮುಂದುವರಿಕೆ ಎಚ್ಚರಿಕೆ Read More »

ಕರಾವಳಿ

ಸರಸ್ವತೀ ವಿದ್ಯಾಲಯ ಪ್ರೌಢ ಶಾಲೆಗೆ 75 ಶೇಕಡ ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, : ಆ.13, ಕಡಬದ ಸರಸ್ವತಿ ವಿದ್ಯಾಲಯ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 75 ಶೇಕಡ ಫಲಿತಾಂಶ ಬಂದಿರುತ್ತದೆ. ನೂಜಿಬಾಳ್ತಿಲ ಗ್ರಾಮದ ಚಂದ್ರಶೇಖರ ಮತ್ತು ಗಾಯತ್ರಿ ದಂಪತಿಗಳ ಮಗಳಾದ ವಿದ್ಯಾ 582 (93.12%) ಅಂಕವನ್ನು ಪಡೆದು ಶಾಲೆಗೆ ಪ್ರಥಮ , ಕಲ್ಲುಗುಡ್ಡೆಯ ಕಿಟ್ಟು ಅಜಿಲ ಮತ್ತು ವೆಂಕಮ್ಮ ದಂಪತಿಯ ಮಗಳಾದ ಧೃತಿ.ಕೆ.ಕೆ 557(89) ಅಂಕವನ್ನು ಪಡೆದು ದ್ವಿತೀಯ, ಕೋಡಿಂಬಾಳ ನಿವಾಸಿಗಳಾದ ಚನ್ನಪ್ಪಗೌಡ ಮತ್ತು ಮೀನಾಕ್ಷಿ ದಂಪತಿಯ ಮಗಳಾದ ಪೂಜಾ.ಪಿ.ಸಿ 555(88%) ಅಂಕವನ್ನು ಪಡೆದು

ಸರಸ್ವತೀ ವಿದ್ಯಾಲಯ ಪ್ರೌಢ ಶಾಲೆಗೆ 75 ಶೇಕಡ ಫಲಿತಾಂಶ Read More »

ಕರಾವಳಿ

ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  ಮಂಗಳೂರು ಆ. 12, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಇ-ಪಂಚಾಯತ್ ಯೋಜನೆಯಡಿ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಆನ್‍ಲೈನ್ ಮೂಲಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಹುದ್ದೆಯ ವಿವರ ಇಂತಿವೆ: ಹುದ್ದೆಯ ಹೆಸರು-ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರು (ಎ.ಡಿ.ಪಿ.ಎಮ್.) ಅರ್ಹತೆ -ಬಿ.ಇ. (ಸಿ.ಎಸ್/ಇ. ಮತ್ತು ಸಿ/ಐ.ಎಸ್)/ ಎಮ್.ಸಿ.ಎ/ಬಿ.ಸಿಎ, ಮಾಸಿಕ ವೇತನ ರೂ 25,000 (ಸೇವಾ ಶುಲ್ಕ+ ಸೇವಾ ತೆರಿಗೆ ಪ್ರತ್ಯೇಕ), ಖಾಲಿ ಹುದ್ದೆಗಳ ಸಂಖ್ಯೆ-1. ದ.ಕ. ಜಿಲ್ಲಾ ಪಂಚಾಯತ್

ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆ- ಅರ್ಜಿ ಆಹ್ವಾನ Read More »

ಕರಾವಳಿ

ಕಾಂತಮಂಗಲದಲ್ಲಿ ಏಕಾಏಕಿ ಸ್ಮೋಕ್‌ ಹೌಸ್‌ನಲ್ಲಿ ಬೆಂಕಿ➤ 3ಲಕ್ಷಕೂ ಅಧಿಕ ನಷ್ಟ

(ನ್ಯೂಸ್ ಕಡಬ) newskadaba.com.ಸುಳ್ಯ,ಆ.13: ಅಜ್ಜಾವರ ಗ್ರಾಮದ ಕಾಂತಮಂಗಲದ ಸೂರ್ಯಾಜಿ ರಾವ್‌ ಅವರ ರಬ್ಬರ್‌ ಒಣಗಿಸುವ ಸ್ಮೋಕ್‌ ಹೌಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸ್ಮೋಕ್‌ ಹೌಸ್‌ ಭಾಗಶಃ ಸುಟ್ಟು ಕರಕಲಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ರಾತ್ರಿ ಆಕಸ್ಮಿಕವಾಗಿ ಬೆಂಕಿ ಆವರಿಸಿಕೊಂಡು ಸ್ಮೋಕ್‌ ಹೌಸ್‌ ಉರಿಯಲಾರಂಭಿಸಿದೆ ಏಕಾಏಕಿ ಹೊತ್ತಿಕೊಂಡ ಬೆಂಕಿ ನಂದಿಸಲು ತಕ್ಷಣವೇ ಅಗ್ನಿಶಾಮಕ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದರು. ತಕ್ಷಣವೇ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿಯಿಂದಾಗಿ ಸುಮಾರು 3ಲಕ್ಷಕ್ಕೂ ಅಧಿಕ

ಕಾಂತಮಂಗಲದಲ್ಲಿ ಏಕಾಏಕಿ ಸ್ಮೋಕ್‌ ಹೌಸ್‌ನಲ್ಲಿ ಬೆಂಕಿ➤ 3ಲಕ್ಷಕೂ ಅಧಿಕ ನಷ್ಟ Read More »

ಕರಾವಳಿ
Scroll to Top