ಪಾಣೆಮಂಗಳೂರು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ನಿಂದ ಬೆಂಕಿಹಾಹುತಿಯಾದ ಬೇಕರಿ

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಆ.14:  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿಯೊಂದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಕಳೆದ ರಾತ್ರಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರುನಲ್ಲಿ ನಡೆದಿದೆ.

ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ರಾಜೇಶ್ ಎಂಬವರಿಗೆ ಸೇರಿದ ವಿಷ್ಣು ಬೇಕರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಸುಟ್ಟು ಭಸ್ಮವಾಗಿದೆ.ರಾತ್ರಿ ಅಂಗಡಿ ಬಾಗಿಲು ಹಾಕಿ ಹೋದ ಬಳಿಕ ಮಧ್ಯ ರಾತ್ರಿ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ 10 ಲಕ್ಷ ರೂ.ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಕೆಲ ಸಮಯಗಳ ಹಿಂದೆಯಷ್ಟೇ ಈ ಅಂಗಡಿಯನ್ನು ನವೀಕರಣ ಮಾಡಲಾಗಿತ್ತು.ಸ್ಥಳಕ್ಕೆ ಬಂಟ್ವಾಳ ನಗರ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top