ನ್ಯೂಸ್ ಕಡಬ

ದ್ವಿತೀಯ ಪಿಯುಸಿ ಫಲಿತಾಂಶ ► ಕಡಬ ಸರಕಾರಿ ಪದವಿ ಪುರ್ವ ಕಾಲೇಜಿಗೆ 88% ಫಲಿತಾಂಶ

  (ನ್ಯೂಸ್ ಕಡಬ) newskadaba.com ಕಡಬ, ಎ.30. ಕಡಬ ತಾಲೂಕಿನ ಸರ್ಕಾರಿ ಪದವಿ ಪುರ್ವ ಕಾಲೇಜಿನಿಂದ ಒಟ್ಟು 114 ವಿದ್ಯಾರ್ಥಿಗಳು ಹಾಜರಾಗಿದ್ದು , ಈ ಪೈಕಿ ಒಟ್ಟು 100 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ (ಪಿ.ಸಿಎಂ.ಬಿ) ವಿಭಾಗದಲ್ಲಿ ಒಟ್ಟು 23 ಮಂದಿ ವಿದ್ಯಾರ್ಥಿಗಳ ಪೈಕಿ 22 ಮಂದಿ ಉತ್ತೀರ್ಣರಾಗಿ ಶೇಕಡಾ 96 ಫಲಿತಾಂಶ ದಾಖಲಾಗಿರುತ್ತದೆ. ಈ ಪೈಕಿ 16 ಮಂದಿ ಪ್ರಥಮ ಶ್ರೇಣಿಯಲ್ಲಿ, 05 ಮಂದಿ ದ್ವಿತೀಯ ಶ್ರೇಣಿಯಲ್ಲಿ ಹಾಗೂ 01 ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 505 ಅಂಕ ಗಳಿಸುವ ಮೂಲಕ ಕು.ಮಂಜುಳಾ.ಕೆ. ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ವಾಣಿಜ್ಯ (ಹೆಚ್.ಇ.ಬಿ.ಎ)ವಿಭಾಗದಲ್ಲಿ […]

ದ್ವಿತೀಯ ಪಿಯುಸಿ ಫಲಿತಾಂಶ ► ಕಡಬ ಸರಕಾರಿ ಪದವಿ ಪುರ್ವ ಕಾಲೇಜಿಗೆ 88% ಫಲಿತಾಂಶ Read More »

ಕರಾವಳಿ

ಆಯಿಶಾ ಕಾಲೇಜು ಆತೂರು ಶೇ. 100 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಎ.30. ಕಡಬ ತಾಲೂಕಿನ ಆಯಿಶಾ ಆತೂರು ಹೆಣ್ಣುಮಕ್ಕಳ ಪದವಿ ಪೂರ್ವ ಕಾಲೇಜಿನಿಂದ ಪಿಯುಸಿ ಪರೀಕ್ಷೆಗೆ ಕಲಾ ಮತ್ತು ವಾಣಿಜ್ಯ ವಿಭಾಗದಿಂದ ಹಾಜರಾದ ಒಟ್ಟು 30 ವಿದ್ಯಾರ್ಥಿಗಳೂ ಉತ್ತೀರ್ಣರಾಗುವುದರೊಂದಿಗೆ ಶೇ.100 ಫಲಿತಾಂಶ ದೊರೆತಿದೆ. ವಾಣಿಜ್ಯ ವಿಭಾಗದಿಂದ 18 ವಿದ್ಯಾರ್ಥಿಗಳ ಪೈಕಿ ಸಹದಾ (57), ಫಾಹಿಮಾ(565), ಮೈನಾಝ್( 524), ರಮೀಝಾ (516) ಉನ್ನತ ಶ್ರೇಣಿಯಲ್ಲಿ , 14 ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಿಂದ 12 ವಿದ್ಯಾರ್ಥಿಗಳ ಪೈಕಿ 8 ಪ್ರಥಮ, 4 ದ್ವಿತೀಯ ಸ್ಥಾನದಲ್ಲಿ ಉತ್ತಿರ್ಣರಾಗಿದ್ದಾರೆ.

ಆಯಿಶಾ ಕಾಲೇಜು ಆತೂರು ಶೇ. 100 ಫಲಿತಾಂಶ Read More »

ಕರಾವಳಿ

ದ್ವಿತೀಯ ಪಿಯುಸಿ ಫಲಿತಾಂಶ ► ಕಡಬ ಸೈಂಟ್ ಜೋಕಿಮ್ಸ್‌ ಪದವಿ ಪೂರ್ವ ಕಾಲೇಜಿಗೆ ಶೇ. 94 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಎ.30. ಕಡಬ ತಾಲೂಕಿನ ಸೈಂಟ್ ಜೋಕಿಮ್ಸ್‌ ಪದವಿಪುರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ. 94.20 ಲಭಿಸಿದೆ. ಕಲಾವಿಭಾಗ ಶೇ.91.66 ಕಲಾ ವಿಭಾಗದಿಂದ ಒಟ್ಟು 12 ವಿದ್ಯಾರ್ಥಿಗಳು ಪರೀಕ್ಷೆಗ ಹಾಜರಾಗಿದ್ದು, ಈ ಪೈಕಿ 3 ಪ್ರಥಮ, 3 ದ್ವಿತೀಯ, 5 ತೃತೀಯ ಸ್ಥಾನದೊಂದಿಗೆ ಒಟ್ಟು 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗ ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಹಾಜರಾದ 84 ವಿದ್ಯಾರ್ಥಿಗಳ ಪೈಕಿ 79 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಡಿಸ್ಟಿಂಕ್ಷನ್ 11, ಪ್ರಥಮ 52,

ದ್ವಿತೀಯ ಪಿಯುಸಿ ಫಲಿತಾಂಶ ► ಕಡಬ ಸೈಂಟ್ ಜೋಕಿಮ್ಸ್‌ ಪದವಿ ಪೂರ್ವ ಕಾಲೇಜಿಗೆ ಶೇ. 94 ಫಲಿತಾಂಶ Read More »

ಕರಾವಳಿ

ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಿನ ಭೀತಿ- ಸೈಮನ್ ಸಿ.ಜೆ.

(ನ್ಯೂಸ್ ಕಡಬ) newskadaba.com ಕಡಬ, ಎ.30. ಡಾ| ರಘುರವರು ಮೂರು ಅವಧಿಯಲ್ಲಿ ಸ್ಪರ್ದಿಸಿ ಕಳೆದ ಚುನಾವಣೆಯಲ್ಲಿ ಅಲ್ಪಮತದಿಂದ ಸೋತರು. 15 ವರ್ಷಗಳಿಂದ ಕ್ಷೇತ್ರ ಬಿಡದೆ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸುಳ್ಯ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಸರಕಾರದಿಂದ ಹಲವು ಅಭಿವೃದ್ಧಿ ಕೆಲಸಮಾಡಿರುವುದೇ ಈ ಬಾರಿ ಡಾ| ರಘು ಅವರಿಗೆ ಶ್ರೀರಕ್ಷೆಯಾಗಲಿದೆ ನಮ್ಮ ಅಭ್ಯರ್ಥಿ ಅವರು ಒಬ್ಬ ಸರಳ ವ್ಯಕ್ತಿತ್ವದ ವಿದ್ಯಾವಂತ ಅಭ್ಯರ್ಥಿಯಾಗಿದ್ದು ಈ ಬಾರಿ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ಪತಾಕೆ ಹಾಕುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸೈಮನ್

ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಿನ ಭೀತಿ- ಸೈಮನ್ ಸಿ.ಜೆ. Read More »

ಕರಾವಳಿ

ಅಡುಗೆ ಮಾಹಿತಿ ► ಸಿಹಿ ಪ್ರಿಯರಿಗೆ ಇಲ್ಲಿದೆ ಗೋದಿ ಹಿಟ್ಟಿನ ಶಾವಿಗೆ

ಬೇಕಾಗುವ ಸಾಮಾಗ್ರಿಗಳು : ಬಾದಾಮಿ(6) ಗೋಡಂಬಿ(6) ಅಕ್ರೋಡು(6) ಗೇರುಬೀಜ(6) ಪಿಸ್ತಾ(6) ಒಣ ದ್ರಾಕ್ಷಿ(20) ಹಾಲು(3 ಲೋಟ) ಗೋದಿ ಹಿಟ್ಟಿನ ಶಾವಿಗೆ(¾ ಲೋಟ) ಸಕ್ಕರೆ(¾ ಲೋಟ) ತುಪ್ಪ(2-3 ಚಮಚ) ಗಸಗಸೆ(2 ಚಮಚ) ಜಾಜಿಕಾಯಿ(ಸ್ವಲ್ಪ) ಏಲಕ್ಕಿ(4) ಕೇಸರಿ(4 ದಳ) ಮಾಡುವ ವಿಧಾನ: ಹಿಂದಿನ ದಿನ ಗಸಗಸೆ, ಕೇಸರಿದಳವನ್ನು ಬಿಟ್ಟು ಉಳಿದ ಒಣಹಣ್ಣುಗಳನ್ನು ನೀರಿನಲ್ಲಿ ನೆನೆ ಹಾಕಿ. ಏಲಕ್ಕಿ, ಜಾಜಿಕಾಯಿಯನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ನೆನೆ ಹಾಕಿದ ಒಣಹಣ್ಣುಗಳನ್ನು ಸಣ್ಣಗೆ ಕತ್ತರಿಸಿ ಇಡಿ. ಒಂದು ಚಮಚ ತುಪ್ಪ ಹಾಕಿ ಬಾಣಲೆಯಲ್ಲಿ ಇದನ್ನು ಚೆನ್ನಾಗಿ ಹುರಿದುಕೊಳ್ಳಿ.

ಅಡುಗೆ ಮಾಹಿತಿ ► ಸಿಹಿ ಪ್ರಿಯರಿಗೆ ಇಲ್ಲಿದೆ ಗೋದಿ ಹಿಟ್ಟಿನ ಶಾವಿಗೆ Read More »

ಅಡುಗೆ

ಪೆರಾಬೆ: ಕಾಂಗ್ರೆಸ್ ಕಾರ್ಯಕರ್ತರ ಸಭೆ ► “ಈ ಬಾರಿ ನನಗೊಂದು ಅವಕಾಶ ಮಾಡಿಕೊಡಿ”- ಡಾ. ರಘು

(ನ್ಯೂಸ್ ಕಡಬ) newskadaba.com ಕಡಬ, ಎ.28. ಕಾಂಗ್ರೆಸ್ ಪಕ್ಷ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿ ನನಗೆ ಮತ್ತೊಂದು ಅವಕಾಶ ನೀಡಿದೆ, ಜನರ ಸೇವೆ ಮಾಡಲು ಕ್ಷೇತ್ರದ ಮತದಾರರು ಈ ಬಾರಿ ನನಗೊಂದು ಅವಕಾಶ ಮಾಡಿಕೊಡಬೇಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ರಘು ಬೆಳ್ಳಿಪ್ಪಾಡಿ ಹೇಳಿದರು. ಗುರುವಾರ ಪೆರಾಬೆ ಗ್ರಾಮದ ಅಗತ್ತಾಡಿ ಕಡೀರಡ್ಕದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಳೆದ ಬಾರಿ ಅತೀ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದೆ, ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್

ಪೆರಾಬೆ: ಕಾಂಗ್ರೆಸ್ ಕಾರ್ಯಕರ್ತರ ಸಭೆ ► “ಈ ಬಾರಿ ನನಗೊಂದು ಅವಕಾಶ ಮಾಡಿಕೊಡಿ”- ಡಾ. ರಘು Read More »

ಕರಾವಳಿ

ಸ್ವಯಂಘೋಷಿತ ದೇವಮಾನವ ಅಸಾರಾಂಗೆ ಜೀವಾವಧಿ ಶಿಕ್ಷೆ!

(ನ್ಯೂಸ್ ಕಡಬ) newskadaba.com ಜೋಧ್‍ಪುರ, ಎ.25. 2013ರಲ್ಲಿ 16 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಮೂಲ ಆರೋಪಿಯಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ದೊರಕಿದೆ. ಈ ಮೂಲಕ ದೇಶಾದ್ಯಂತ ಬಹಳ ಜನರ ಆಕ್ರೋಶಕ್ಕೆ ಗುರಿಯಾಗಿದ್ದ, 5 ವರ್ಷ ಹಳೆಯದಾದ ಈ ಪ್ರಕರಣದಲ್ಲಿ ಆರೋಪಿಗಳಿಗೆ ತಕ್ಕ ಶಾಸ್ತಿಯಾಗಿದೆ. 2013ರಲ್ಲಿ ಮಧ್ಯಪ್ರದೇಶದ ಛಿಂದ್‌ವಾರಾದ ತನ್ನ ಆಶ್ರಮದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಅಪ್ರಾಪ್ತೆಯ ಮೇಲೆ 77ರ ಹರೆಯದ ಅಸಾರಾಂ ಬಾಪುವು ಅತ್ಯಾಚಾರವೆಸಗಿದ್ದನು. ಈ ಕುರಿತು ಬಾಲಕಿಯು ಪೋಲೀಸರಿಗೆ ದೂರು ನೀಡಿದ್ದಳು. ಆದರೆ

ಸ್ವಯಂಘೋಷಿತ ದೇವಮಾನವ ಅಸಾರಾಂಗೆ ಜೀವಾವಧಿ ಶಿಕ್ಷೆ! Read More »

ರಾಷ್ಟ್ರೀಯ ನ್ಯೂಸ್

ಶೂನ್ಯ ನೆರಳಿನ ದಿನದ ಪ್ರಾತ್ಯಕ್ಷಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.25. ಪಿಲಿಕುಳ  ವಿಜ್ಞಾನ ಕೇಂದ್ರದಲ್ಲಿ ಏಪ್ರಿಲ್ 24 ರಂದು ಶೂನ್ಯ ನೆರಳಿನ ದಿನದ ವಿದ್ಯಮಾನದ ಬಗ್ಗೆ ವಿವರಣೆಯನ್ನು ಮತ್ತು ಅದಕ್ಕೆ ಸಂಬಂಧ ಪಟ್ಟ ಪ್ರಾತ್ಯಕ್ಷಿಕೆಗಳನ್ನು ಆಸಕ್ತ ಸಂದರ್ಶಕರಿಗೆ ಏರ್ಪಡಿಸಲಾಗಿತ್ತು. ಸಂದರ್ಶಕರು ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಸಂದೇಹಗಳಿಗೆ ವಿವರಣೆಯನ್ನು ಪಡೆದುಕೊಂಡರು. ಶೈಕ್ಷಣಿಕ ಸಹಾಯಕ ಶರಣಯ್ಯ  ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ ಕೆ.ವಿ ರಾವ್ ಉಪಸ್ಥಿತರಿದ್ದರು.

ಶೂನ್ಯ ನೆರಳಿನ ದಿನದ ಪ್ರಾತ್ಯಕ್ಷಿಕೆ Read More »

ಕರಾವಳಿ

ಮತ ಖಾತ್ರಿಗೆ ವಿವಿಪ್ಯಾಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಎ.25. ಚುನಾವಣಾ ಪ್ರಕ್ರಿಯೆ ಕುರಿತಂತೆ ಮತದಾರರಲ್ಲಿ ಜಾಗೃತಿ ಮತ್ತು ಅರಿವಿನ ಕೊರತೆ ಇನ್ನೂ ಇದೆ ಎಂಬ ಅಂಶ ಚುನಾವಣಾ ಆಯೋಗ ಇತ್ತೀಚೆಗೆ ರಾಜ್ಯದ 4 ಕಂದಾಯ ವಿಭಾಗಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ  ಮತದಾರರ ಅರಿವು, ಮನೋಭಾವ ಮತ್ತು ಅಭ್ಯಾಸಗಳ ಕುರಿತು ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿತು. ಸಮೀಕ್ಷೆಯಲ್ಲಿ  ಕಂಡು ಬಂದ ಅಂಶಗಳ ಆಧಾರದ ಮೇಲೆ ಅಗತ್ಯ ಸಂವಹನ ವಿಧಾನ ಮತ್ತು ಮಧ್ಯಸ್ಥಿಕೆಗಳನ್ನು  ಸ್ವೀಪ್ ಮುಖಾಂತರ ಚುನಾವಣಾ ಆಯೋಗ ಕೈಗೊಂಡಿದೆ. ಸಮೀಕ್ಷೆಯ ಪ್ರಕಾರ ರಾಜ್ಯದ ಶೇ.

ಮತ ಖಾತ್ರಿಗೆ ವಿವಿಪ್ಯಾಟ್ Read More »

ಕರಾವಳಿ

ಇಂದು( ಎಪ್ರಿಲ್ 25) -ವಿಶ್ವ ಮಲೇರಿಯಾ ದಿನ

(ನ್ಯೂಸ್ ಕಡಬ) newskadaba.com  ಎ.25. ಪ್ರತಿ ವರ್ಷ ಎಪ್ರೀಲ್ 25ರಂದು ವಿಶ್ವದಾದ್ಯಂತ “ವಿಶ್ವ ಮಲೇರಿಯಾ” ದಿನ ಎಂದು ಆಚರಿಸಲಾಗುತ್ತಿದೆ. ಮಲೇರಿಯಾ ರೋಗದಿಂದಾಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಹೆಚ್ಚಿಸಿ ಅರಿವು ಮೂಡಿಸಿ ರೋಗದ ಬಗ್ಗೆ ಜಾಗ್ರತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು. ವಿಶ್ವದಾದ್ಯಂತ ಸರಿಸುಮಾರು 3.3 ಬಿಲಿಯನ್ ಮಂದಿ ಈ ರೋಗಕ್ಕೆವರ್ಷವೊಂದರಲ್ಲಿ ತುತ್ತಾಗುತ್ತಿದ್ದು, 2012ರಲ್ಲಿ 6.5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 2013ರಲ್ಲಿ 5.8 ಲಕ್ಷ ಮಂದಿ ಜೀವ ತೆತ್ತಿದ್ದಾರೆ ಎಂದು ಅಂಕಿ ಅಂಶಗಳಿದ ತಿಳಿದುಬಂದಿದೆ.

ಇಂದು( ಎಪ್ರಿಲ್ 25) -ವಿಶ್ವ ಮಲೇರಿಯಾ ದಿನ Read More »

ಆರೋಗ್ಯ ಮಾಹಿತಿ
Scroll to Top