NewsKadaba Team

ವಿಟ್ಲ: ಬಾವನಿಂದಲೇ ನಾದಿನಿಯ ಅತ್ಯಾಚಾರ…! ➤ ನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್

(ನ್ಯೂಸ್ ಕಡಬ) newskadaba.com ವಿಟ್ಲ, ಜ. 03. ನಾದಿನಿಯನ್ನೇ ಅತ್ಯಾಚಾರಗೈದ ಪ್ರಕರಣ ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಎಂಬಲ್ಲಿ ನಡೆದಿದೆ. ಮನೆಯಲ್ಲಿ ಯುವತಿ ಹಾಗೂ ಆಕೆಯ ತಾಯಿ ಇಬ್ಬರೇ ಇದ್ದ ಸಂದರ್ಭದಲ್ಲಿ ಬಶೀರ್ ಅವರ ಮನೆಗೆ ತೆರಳಿ ಅತ್ತೆಯನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿ, ಬಲವಂತದಿಂದ ಯುವತಿಯನ್ನು ಅತ್ಯಾಚಾರಗೈದಿದ್ದಾನೆ. ಈ ಕುರಿತು ಯುವತಿಯು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ: ಬಾವನಿಂದಲೇ ನಾದಿನಿಯ ಅತ್ಯಾಚಾರ…! ➤ ನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಡುಪಿ: ಸಮುದ್ರದಲ್ಲಿ ಮುಳುಗಿದ ನಾಲ್ವರ ರಕ್ಷಣೆ

(ನ್ಯೂಸ್ ಕಡಬ) newskadaba.com ಉಡುಪಿ, ಜ. 03. ಕಾಪು ಬೀಚ್ ನಲ್ಲಿ ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ ಘಟನೆ ನಡೆದಿದೆ. ಬೀಚ್ ಗೆ ತೆರಳಿದ್ದ ಮೈಸೂರು ಮೂಲದ ಪರಶಿವ, ತೇಜಸ್, ರಾಹುಲ್ ಮತ್ತು ಪವನ್ ಇವರನ್ನು ಸ್ಥಳೀಯರು ಸಮುದ್ರಕ್ಕೆ ಇಳಿಯುವುದನ್ನು ವಿರೋಧಿಸಿದರೂ, ನಿರ್ಲಕ್ಷ್ಯ ಮಾಡಿ ಆಟವಾಡಲು ಇಳಿದಿದ್ದರು. ನಂತರ ಈ ತಂಡವು ಏಕಾಏಕಿ ನೀರಿನಲ್ಲಿ ಮುಳುಗಿದ್ದು, ಇದನ್ನು ಕಂಡ ಸ್ಥಳೀಯರಾದ ಪ್ರಶಾಂತ್ ಕರ್ಕೇರ, ಪ್ರದೀಪ್ ಹಾಗೂ ಜೇಕ್ಸನ್ ಎಂಬವರು ಸಮುದ್ರಕ್ಕೆ ಇಳಿದು ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ್ದಾರೆ.

ಉಡುಪಿ: ಸಮುದ್ರದಲ್ಲಿ ಮುಳುಗಿದ ನಾಲ್ವರ ರಕ್ಷಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಮಹಿಳೆಗೆ ಬೈಕ್ ಢಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 03. ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಾಯಗೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಗಾಯಾಳು ಮಹಿಳೆಯನ್ನು ಮೊಟ್ಟೆತ್ತಡ್ಕ ನಿವಾಸಿ ಐರಿನ್ ಡಿಸೋಜಾ ಎನ್ನಲಾಗಿದೆ. ಗಾಯಾಳುವನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು: ಮಹಿಳೆಗೆ ಬೈಕ್ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕನ್ನಡ ಪುಸ್ತಕ ಪ್ರಾಧಿಕಾರ – ಪುಸ್ತಕಗಳು ಶೇಕಡಾ 50%ರ ರಿಯಾಯಿತಿಯಲ್ಲಿ ಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03. ಗಣರಾಜ್ಯೋತ್ಸವದ ಅಂಗವಾಗಿ ಪ್ರಸ್ತುತ ಸಾಲಿನ ಜನವರಿ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಮಾಡಲಾಗುತ್ತಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಕನ್ನಡ ಪುಸ್ತಕ ಪ್ರಾಧಿಕಾರದ

ಕನ್ನಡ ಪುಸ್ತಕ ಪ್ರಾಧಿಕಾರ – ಪುಸ್ತಕಗಳು ಶೇಕಡಾ 50%ರ ರಿಯಾಯಿತಿಯಲ್ಲಿ ಲಭ್ಯ Read More »

ಕರಾವಳಿ, ಕರ್ನಾಟಕ

ಪ್ರಧಾನ ಮಂತ್ರಿ ಶಿಷ್ಯ ವೇತನ ಯೋಜನೆ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03. ಪ್ರಸ್ತುತ ಸಾಲಿಗೆ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದಿರುವ ಮಾಜಿ ಸೈನಿಕರ ಮಕ್ಕಳು  ಪಿ.ಯು.ಸಿ  2ನೇ ವರ್ಷ ಹಾಗೂ ಡಿಪ್ಲೋಮಾ 3ನೇ ವರ್ಷದಲ್ಲಿ ಶೇ.60 ಅಂಕ ಪಡೆದವರು,  ಪ್ರಧಾನ ಮಂತ್ರಿ ಶಿಷ್ಯ ವೇತನ ಯೋಜನೆ-2020-21ನೇ ಸಾಲಿಗೆ ಆನ್‍-ಲೈನ್ www.ksb.gov.inನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ,  ಉರ್ವ ಸ್ಟೋರ್ಸ್, ಅಶೋಕನಗರ

ಪ್ರಧಾನ ಮಂತ್ರಿ ಶಿಷ್ಯ ವೇತನ ಯೋಜನೆ – ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ತರಕಾರಿ ಸಾಗಾಟದ ಲಾರಿ ಪಲ್ಟಿ ➤ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ಜ. 02. ತರಕಾರಿ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಲಾರಿ ಚಾಲಕ ಮೃತಪಟ್ಟು, ನಿರ್ವಾಹಕ ಗಾಯಗೊಂಡ ಘಟನೆ ಮಾಳ ಘಾಟಿಯಲ್ಲಿ ಇಂದು ನಡೆದಿದೆ. ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ನಿವಾಸಿ ಅಣ್ಣಪ್ಪ(57) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನಿಂದ ಬಜಗೋಳಿಗೆ ತರಕಾರಿ ಸಾಗಿಸುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಬಿದ್ದಿದ್ದು, ಪರಿಣಾಮ ಗಂಭೀರವಾಗಿ ಗಾಯಗೊಂಡ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತರಕಾರಿ ಸಾಗಾಟದ ಲಾರಿ ಪಲ್ಟಿ ➤ ಚಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಸಿಟ್ಟಿನಿಂದ ಬಾತ್ ರೂಮ್ ನಲ್ಲಿ ಕುಳಿತ ಬಾಲಕ ➤ ಅಗ್ನಿ ಶಾಮಕದಳದವರು ಬಂದಾಗ ಕಾದಿತ್ತು ಅಚ್ಚರಿ…!

(ನ್ಯೂಸ್ ಕಡಬ) newskadaba.com ಮಣಿಪಾಲ, ಜ. 02. ಅಮ್ಮ ಮೊಬೈಲ್ ಕಿತ್ತುಕೊಂಡಳು ಎಂಬ ಕಾರಣಕ್ಕೆ ಯುವಕನೋರ್ವ ಮನೆಯ ಬಾತ್ ರೂಮ್ ನಲ್ಲಿ ಬಾಗಿಲು ಹಾಕಿ ಗಂಟೆಗಟ್ಟಲೆ ಕುಳಿತು ಅವಾಂತರ ಸೃಷ್ಟಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ. ರಾತ್ರಿಯಿಡೀ ಮೊಬೈಲಿನಲ್ಲಿ ಆಟವಾಡುತ್ತಿದ್ದ ಮಗನಿಗೆ ಗದರಿಸಿದ ತಾಯಿಯು ಮಗನಿಂದ ಮೊಬೈಲ್ ಕಿತ್ತುಕೊಂಡಿದ್ದು, ಇದರಿಂದ ಕೋಪಗೊಂಡ ಮಗ ಮನೆಯ ಬಾತ್ ರೂಮ್ ನಲ್ಲಿ ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಕೂತಿದ್ದ. ತಾಯಿ ಅದೆಷ್ಟು ಬಾರಿ ಕರೆದರೂ ಮಗ ಬಾಗಿಲು ತೆರೆಯದಿದ್ದಾಗ, ಆತಂಕಗೊಂಡ ತಾಯಿಯು ಅಗ್ನಿಶಾಮಕ

ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಸಿಟ್ಟಿನಿಂದ ಬಾತ್ ರೂಮ್ ನಲ್ಲಿ ಕುಳಿತ ಬಾಲಕ ➤ ಅಗ್ನಿ ಶಾಮಕದಳದವರು ಬಂದಾಗ ಕಾದಿತ್ತು ಅಚ್ಚರಿ…! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೇಶದ ಮತ್ತೊಂದು ಆಸ್ತಿ ಮಾರಾಟಕ್ಕೆ ಕೇಂದ್ರ ಪ್ಲಾನ್..! ➤ 90 ಸಾವಿರ ಕೋಟಿಗೆ ಮಾರಾಟವಾಗಲಿದೆಯೇ ಪೆಟ್ರೋಲ್ ಕಂಪನಿ..?

(ನ್ಯೂಸ್ ಕಡಬ) newskadaba.com ದೆಹಲಿ, ಜ. 02. ಕೇಂದ್ರ ಸರ್ಕಾರವು ಸರ್ಕಾರಿ ಒಡೆತನದ ಆಸ್ತಿಗಳನ್ನೆಲ್ಲಾ ಖಾಸಗಿಯವರಿಗೆ ಮಾರುತ್ತಿದ್ದಾರೆ‌ ಎಂಬ ಆರೋಪದ ಬೆನ್ನಲ್ಲೇ ದೇಶದ ಮತ್ತೊಂದು ದೊಡ್ಡ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಸರ್ಕಾರವು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡನ್ನು ಖಾಸಗೀಕರಣ ಮಾಡಿ ಸುಮಾರು 90 ಸಾವಿರ ಕೋಟಿ ಸಂಗ್ರಹಿಸಲು ಎದುರು ನೋಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ಮತ್ತೊಂದು ಆಸ್ತಿ ಮಾರಾಟಕ್ಕೆ ಕೇಂದ್ರ ಪ್ಲಾನ್..! ➤ 90 ಸಾವಿರ ಕೋಟಿಗೆ ಮಾರಾಟವಾಗಲಿದೆಯೇ ಪೆಟ್ರೋಲ್ ಕಂಪನಿ..? Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಮಗಾರಿ ವೀಕ್ಷಿಸುತ್ತಿದ್ದ ಸಂದರ್ಭ ಆಕಸ್ಮಾತ್ ಗುಡ್ಡ ಕುಸಿತ ➤ ಕೂದಲೆಳೆಯ ಅಂತರದಿಂದ ಪಾರಾದ ಸಚಿವ ಜಗದೀಶ್ ಶೆಟ್ಟರ್…!

(ನ್ಯೂಸ್ ಕಡಬ) newskadaba.com ಜ. 02. ರೈಲ್ವೇ ಕಾಮಗಾರಿ ವೀಕ್ಷಣೆಯ ಸಂದರ್ಭ ದಿಢೀರ್ ಮಣ್ಣು ಕುಸಿದು ಸಚಿವ ಜಗದೀಶ್ ಶೆಟ್ಟರ್ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ದೇಶಪಾಂಡೆ ನಗರದಲ್ಲಿ ನಡೆದಿದೆ. ಹುಬ್ಬಳ್ಳಿಯ ಭವಾನಿನಗರ ಹಾಗೂ ದೇಶಪಾಂಡೆ ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳಸೇತುವೆ ನಿರ್ಮಾಣದ ಕಾಮಗಾರಿಯು ಅಭಿವೃದ್ಧಿ ಪರಿಶೀಲನೆಗೆಂದು ಜಗದೀಶ್ ಶೆಟ್ಟರ್ ಮತ್ತು ಮತ್ತು ಅಧಿಕಾರಿಗಳು ಅಲ್ಲಿಗೆ ತೆರಳಿದ್ದ ಸಮಯದಲ್ಲಿ ಕೆಳಸೇತುವೆ ಪಕ್ಕದಲ್ಲಿ ಭಾರಿ ಪ್ರಮಾಣದ ಮಣ್ಣಿನ ದಿಬ್ಬ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಅಧಿಕಾರಿಗಳು

ಕಾಮಗಾರಿ ವೀಕ್ಷಿಸುತ್ತಿದ್ದ ಸಂದರ್ಭ ಆಕಸ್ಮಾತ್ ಗುಡ್ಡ ಕುಸಿತ ➤ ಕೂದಲೆಳೆಯ ಅಂತರದಿಂದ ಪಾರಾದ ಸಚಿವ ಜಗದೀಶ್ ಶೆಟ್ಟರ್…! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಟ್ಲ: ವಿಜಯೋತ್ಸವ ಮೆರವಣಿಗೆಯ ವೇಳೆ ರಿಕ್ಷಾ ಚಾಲಕನಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 02. ವಿಜಯೋತ್ಸವ ಮೆರವಣಿಗೆಯ ವೇಳೆ ರಿಕ್ಷಾವನ್ನು ಅಡ್ಡ ದಿಡ್ಡಿಯಾಗಿ ಚಲಾಯಿಸಿದ್ದಾರೆ ಎಂದು ಆರೋಪಿಸಿ ತಂಡವೊಂದು ಆಟೋ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಕನ್ಯಾನ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ. ಘಟನೆಯಲ್ಲಿ ಸಾದಿಕ್ ಎಂಬವರಿಗೆ ಹಲ್ಲೆಯಾಗಿದ್ದು, ತುಂಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳಾದ ರಿಕ್ಷಾ ಉಮ್ಮರ್‌, ಭಾತಿಷ್‌, ಹಾರಿಸ್‌ ಕುಕ್ಕಾಜೆ, ಮಜೀದ್‌, ಕೆ ಪಿ ಅಬ್ದುಲ್‌ ರಹಿಮಾನ್‌, ಸಾಬಿತ್‌, ಇಸ್ಮಾಯಿಲ್ ಕುಕ್ಕಾಜೆ, ಆಸೀಫ್‌, ವಾಜಿಪಾಯಿ ನಾಸೀರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಟ್ಲ: ವಿಜಯೋತ್ಸವ ಮೆರವಣಿಗೆಯ ವೇಳೆ ರಿಕ್ಷಾ ಚಾಲಕನಿಗೆ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top