NewsKadaba Team

ಮೀನು ಮಾರಾಟ ಫೆಡರೇಶನ್: ನೂತನ ಬ್ಯಾಂಕಿಂಗ್ ಶಾಖೆ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮ0ಗಳೂರು, ಮೇ.26. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಪೆಡರೇಶನ್ ನಿ. ಮುಳಿಹಿತ್ಲು, ಬೋಳಾರ, ಮಂಗಳೂರು ಇವರ ಸಹಯೋಗದೊಂದಿಗೆ ನೂತನವಾಗಿ ಪ್ರಾರಂಭಿಸಲಾದ ಬ್ಯಾಂಕಿಂಗ್ ವಿಭಾಗದ ದ್ವಿತೀಯ ಮಂಗಳೂರು ಶಾಖೆ ಇದರ ಉದ್ಘಾಟನಾ ಸಮಾರಂಭವು ಜೂನ್ 1 ರಂದು ಬೆಳಿಗ್ಗೆ 10 ಗಂಟೆಗೆ ಮೀನುಗಾರಿಕಾ ಬಂದರಿನಲ್ಲಿ ನಡೆಯಲಿದೆ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ನಾಡೋಜ, ಡಾ: ಜಿ.ಶಂಕರ್, ಶಾಸಕ ಜೆ.ಆರ್. ಲೋಬೋ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು […]

ಮೀನು ಮಾರಾಟ ಫೆಡರೇಶನ್: ನೂತನ ಬ್ಯಾಂಕಿಂಗ್ ಶಾಖೆ ಉದ್ಘಾಟನೆ Read More »

ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯ: ಸಂಶೋಧನಾ ಕಾರ್ಯಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮ0ಗಳೂರು ಮೇ.26. ಮಂಗಳೂರು ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗಕ್ಕೆ ಕಿರಿಯ ಸಂಶೋಧನಾ ಕೆಲಸಕ್ಕೆ ಸಸ್ಯಶಾಸ್ತ್ರದಲ್ಲಿ ಎಂ.ಎಸ್.ಸಿ. ಪದವಿ ಪಡೆದವರಿಂದ ಅರ್ಜಿ ಆಹ್ವಾನಿಸಲಾಗಿದೆ. ನೇರ ಸಂದರ್ಶನವನ್ನು ಜೂನ್ 9 ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರೊ.ಕೆ.ಆರ್. ಚಂದ್ರಶೇಖರ್, ಪ್ರಧಾನ ಸಂಶೋಧಕರು, ಡಿ.ಎಸ್.ಟಿ. ಪ್ರಾಜೆಕ್ಟ್, ಸಸ್ಯಶಾಸ್ತ್ರ ವಿಭಾಗ, ಮಂಗಳಗಂಗೋತ್ರಿ, ಕೊಣಾಜೆ, ಮಂಗಳೂರು-574199 ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯ: ಸಂಶೋಧನಾ ಕಾರ್ಯಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ: ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಜಾರಿ

(ನ್ಯೂಸ್ ಕಡಬ) newskadaba.com ಮ0ಗಳೂರು ಮೇ.26. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ರಾಜ್ಯ ಸರಕಾರವು ಹಲವಾರು ಪರಿಹಾರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಜಿಲ್ಲೆಯ 29 ಶಿಬಿರಗಳಲ್ಲಿ 3694 ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲಾಗಿದ್ದು, ಗುರುತಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ. ಗುರುತಿಸಿರುವ ಎಲ್ಲಾ ಅರ್ಹ ಸಂತ್ರಸ್ತರಿಗೆ ಗುರುತಿನ ಚೀಟಿಯನ್ನು ವಿತರಿಸಲಾಗಿದೆ. 25 % ರಿಂದ 59 % ರಷ್ಟು ಅಂಗವಿಕಲತೆಯುಳ್ಳವರು 765 ಸಂತ್ರಸ್ತರಿಗೆ ತಲಾ ಮಾಸಿಕ ರೂ 1500/- ರಂತೆ, 60% ಕ್ಕಿಂತ ಹೆಚ್ಚು ಅಂಗವಿಕಲತೆಯುಳ್ಳ 2251 ಸಂತ್ರಸ್ತರಿಗೆ ತಲಾ

ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ: ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಜಾರಿ Read More »

ಕರಾವಳಿ

ಮೇ.30: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ದೂರು ಸ್ವೀಕಾರ

(ನ್ಯೂಸ್ ಕಡಬ) newskadaba.com ಮ0ಗಳೂರು ಮೇ.26. ದಕ್ಷಿಣ ಕನ್ನಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮೇ 30 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸುಳ್ಯ ಸರ್ಕಾರಿ ಪ್ರವಾಸಿ ಮಂದಿರ, ಮಧ್ಯಾಹ್ನ 2.30 ಗಂಟೆಯಿಂದ 4.30 ಗಂಟೆವರೆಗೆ ಪುತ್ತೂರು ಸರ್ಕಾರಿ ಪ್ರವಾಸಿ ಮಂದಿರ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ ಎಂದು ಪೊಲೀಸ್ ಉಪಾಧೀಕ್ಷಕರು, ಎಸಿಬಿ, ದ.ಕ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಮೇ.30: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ದೂರು ಸ್ವೀಕಾರ Read More »

ಕರಾವಳಿ

ಸರ್ಫಿಂಗ್: ಇಂದು ಚಾಲನೆ

(ನ್ಯೂಸ್ ಕಡಬ) newskadaba.com ಮ0ಗಳೂರು, ಮೇ .25. 2ನೇ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಶುಕ್ರವಾರ ಮಂಗಳೂರು ಹೊರವಲಯದ ಸಸಿಹಿತ್ಲು ಕಡಲಿನಲ್ಲಿ ಚಾಲನೆ ದೊರಕಲಿದೆ. ಮೂರು ದಿನಗಳ ಕಾಲ ನಡೆಯುವ ಸರ್ಫಿಂಗ್ ಕ್ರೀಡಾಕೂಟ ಶುಕ್ರವಾರ ಬೆಳಿಗ್ಗೆ 7.30ಕ್ಕೆ ಪ್ರಾರಂಭವಾಗಲಿದ್ದು, ಬೆಳಿಗ್ಗೆ 10 ಗಂಟೆಗೆ ಕ್ರೀಡಾಕೂಟದ ಅಧಿಕೃತ ಉದ್ಘಾಟನೆ ನಡೆಯಲಿದೆ. ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಸರ್ಫಿಂಗ್ ಕ್ರೀಡೆಗೆ ಚಾಲನೆ ನೀಡಲಿದ್ದಾರೆ. 2ನೇ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಬಾಲಿವುಡ್ ಚಿತ್ರನಟ ಸುನೀಲ್ ಶೆಟ್ಟಿ ರಾಯಭಾರಿಯಾಗಲಿದ್ದಾರೆ. ಪ್ರತೀದಿನ ಬೆಳಿಗ್ಗೆ 7.30ರಿಂದ

ಸರ್ಫಿಂಗ್: ಇಂದು ಚಾಲನೆ Read More »

ಕರಾವಳಿ

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪ್ರವಾಸ

(ನ್ಯೂಸ್ ಕಡಬ) newskadaba.com ಮ0ಗಳೂರು, ಮೇ.25. ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮೇ 26ರಂದು ಪ್ರವಾಸ ಇಂತಿವೆ. ಮೇ 26 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಸಸಿಹಿತ್ಲು ಬೀಚ್‍ನಲ್ಲಿ ಇಂಡಿಯನ್ ಒಪನ್ ಆಫ್ ಸರ್ಫಿಂಗ್-2017 ಉದ್ಘಾಟನಾ ಸಮಾರಂಭ, 11.30 ಗಂಟೆಗೆ ಅನಂತಾಡಿ-ಬಾಕಿಲಗುತ್ತು ಶ್ರೀ ವೈದ್ಯನಾಥೇಶ್ವರ ದೈವಸ್ಥಾನ ಇದರ ಶಿಲಾನ್ಯಾಸದ ಅಂಗವಾಗಿ ಸಭಾ ಕಾರ್ಯಕ್ರಮ, ಅಪರಾಹ್ನ ಸ್ಥಳೀಯ ಖಾಸಗಿ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪ್ರವಾಸ Read More »

ಕರಾವಳಿ

ಫೇಲೋಶಿಫ್‍ಗೆ ಅರ್ಜಿ ಆಹ್ವಾನ

ಮ0ಗಳೂರು ಮೇ 25 ಕರ್ನಾಟಕ ವಾರ್ತೆ:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿನಲ್ಲಿ ವಿಶ್ವ ವಿದ್ಯಾನಿಲಯಗಳಲ್ಲಿ ಪಿ.ಹೆಚ್‍ಡಿ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ (ಜೆ.ಆರ್.ಎಫ್ ಮಾದರಿ)ಯಲ್ಲಿ ಪ್ರತಿ ಮಾಹೆ ರೂ. 25,000 ಹಾಗೂ ಪ್ರತಿ ವರ್ಷ ಒಂದು ಬಾರಿ ರೂ. 10,000 ವನ್ನು ಫೇಲೋಶಿಫ್ ಮೂಲಕ ನೀಡುವ ಕಾರ್ಯಕ್ರಮವಿರುತ್ತದೆ. ಈ ಕುರಿತಂತೆ ಮಾಹಿತಿಯು ವೆಬ್‍ಸೈಟ್ ತಿತಿತಿ.goಞಜom.ಞಚಿಡಿ.ಟಿiಛಿ.iಟಿ ನಲ್ಲಿ ಲಭ್ಯವಿದ್ದು ಅರ್ಜಿ ಸಲ್ಲಿಸಲು ಜೂನ್ 10 ಕಡೆಯ ದಿನಾಂಕವಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಪ್ರಕಟಣೆ

ಫೇಲೋಶಿಫ್‍ಗೆ ಅರ್ಜಿ ಆಹ್ವಾನ Read More »

ಕರಾವಳಿ
Scroll to Top