ವಿಟ್ಲ: ವಿಜಯೋತ್ಸವ ಮೆರವಣಿಗೆಯ ವೇಳೆ ರಿಕ್ಷಾ ಚಾಲಕನಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 02. ವಿಜಯೋತ್ಸವ ಮೆರವಣಿಗೆಯ ವೇಳೆ ರಿಕ್ಷಾವನ್ನು ಅಡ್ಡ ದಿಡ್ಡಿಯಾಗಿ ಚಲಾಯಿಸಿದ್ದಾರೆ ಎಂದು ಆರೋಪಿಸಿ ತಂಡವೊಂದು ಆಟೋ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಕನ್ಯಾನ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ.

ಘಟನೆಯಲ್ಲಿ ಸಾದಿಕ್ ಎಂಬವರಿಗೆ ಹಲ್ಲೆಯಾಗಿದ್ದು, ತುಂಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳಾದ ರಿಕ್ಷಾ ಉಮ್ಮರ್‌, ಭಾತಿಷ್‌, ಹಾರಿಸ್‌ ಕುಕ್ಕಾಜೆ, ಮಜೀದ್‌, ಕೆ ಪಿ ಅಬ್ದುಲ್‌ ರಹಿಮಾನ್‌, ಸಾಬಿತ್‌, ಇಸ್ಮಾಯಿಲ್ ಕುಕ್ಕಾಜೆ, ಆಸೀಫ್‌, ವಾಜಿಪಾಯಿ ನಾಸೀರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

Scroll to Top