NewsKadaba Team

ರಾಷ್ಟ್ರೀಯ ಆಯುರ್ವೇದ ದಿನಾಚರಣೆ; ಅಸಮರ್ಪಕ ಜೀವನಶೈಲಿಯಿಂದ ಆರೋಗ್ಯಕ್ಕೆ ಆಪತ್ತು- ಮಮತಾ ಗಟ್ಟಿ

(ನ್ಯೂಸ್ ಕಡಬ) newskadaba.com ಅ. 30. ನಮ್ಮ ದೈನಂದಿನ ಜೀವನದಲ್ಲಿ ಶಿಸ್ತುರಹಿತ ಆಹಾರ ಸೇವನೆ ಮತ್ತು ಅಸಮರ್ಪಕ ಜೀವನ ಶೈಲಿಯಿಂದಾಗಿ ನಮ್ಮ ಆರೋಗ್ಯ ಇಂದು ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ. ಅವರು ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಆಯುಷ್ ಕಾಲೇಜುಗಳು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವೆನ್‍ ಲಾಕ್ ಆಯುಷ್ ಸಂಯುಕ್ತ ಆಸ್ಪತ್ರೆಯಲ್ಲಿ ನಡೆದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು […]

ರಾಷ್ಟ್ರೀಯ ಆಯುರ್ವೇದ ದಿನಾಚರಣೆ; ಅಸಮರ್ಪಕ ಜೀವನಶೈಲಿಯಿಂದ ಆರೋಗ್ಯಕ್ಕೆ ಆಪತ್ತು- ಮಮತಾ ಗಟ್ಟಿ Read More »

ಕರಾವಳಿ

ಶಾಲಾ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಿಗಾವಹಿಸಿ- ಶಿಕ್ಷಕರಿಗೆ ಜಿ.ಪಂ ಸಿಇಓ ಕರೆ

(ನ್ಯೂಸ್ ಕಡಬ) newskadaba.com ಅ. 30. ಶಾಲಾ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಂಡು ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಮನೋಸ್ಥೈರ್ಯ ತರಬೇತಿ ಕಾರ್ಯಕ್ರಮವನ್ನು ಶಿಕ್ಷಕರಿಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್.ಕೆ ಅವರು ಹೇಳಿದರು. ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ

ಶಾಲಾ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಿಗಾವಹಿಸಿ- ಶಿಕ್ಷಕರಿಗೆ ಜಿ.ಪಂ ಸಿಇಓ ಕರೆ Read More »

ಕರಾವಳಿ

ಇಂದು(ಅ.30) ಸಂಸದ ಬ್ರಿಜೇಶ್‌ ಚೌಟ ಸಾರ್ವಜನಿಕ ಭೇಟಿಗೆ ಲಭ್ಯ

(ನ್ಯೂಸ್ ಕಡಬ) newskadaba.com ಅ. 30. ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಇಂದು (ಅ. 30) ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ. ನಾಗರಿಕರು ತಮ್ಮ ಅಹವಾಲುಗಳೊಂದಿಗೆ ಮಂಗಳೂರಿನ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಬಂದು ಕ್ಯಾ. ಚೌಟ ಅವರನ್ನು ಖುದ್ದು ಭೇಟಿ ಮಾಡಬಹುದು. ಆ ಮೂಲಕ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಗಮನಕ್ಕೆ ತರಬಹುದು ಎಂದು ಸಂಸದ ಕ್ಯಾ. ಚೌಟ ಅವರ ಕಚೇರಿ

ಇಂದು(ಅ.30) ಸಂಸದ ಬ್ರಿಜೇಶ್‌ ಚೌಟ ಸಾರ್ವಜನಿಕ ಭೇಟಿಗೆ ಲಭ್ಯ Read More »

ಕರಾವಳಿ

ಅರಂತೋಡು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕಿ ಶ್ರೀಮತಿ ಸರಸ್ವತಿಯವರಿಗೆ ವಿದಾಯ ಸಮಾರಂಭ

(ನ್ಯೂಸ್ ಕಡಬ) newskadaba.com ಅ. 29. ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಳ್ಳಲಿರುವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕಿ ಕೆ ಸರಸ್ವತಿಯವರಿಗೆ ವಿದಾಯ ಸಮಾರಂಭ ಹಾಗೂ ಸಮುದಾಯದತ್ತ ಶಾಲಾ ಕಾರ್ಯಕ್ರಮವು ಮಂಗಳವಾರದಂದು ಅರಂತೋಡಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ವಹಿಸಿದರು. ಈ ಸಂದರ್ಭದಲ್ಲಿ ನಿವೃತಗೊಳ್ಳಲಿರುವ ಸರಸ್ವತಿ ಮತ್ತು ಚಿದಾನಂದ ದಂಪತಿ ಕೊಡುಗೆಯಾಗಿ ನೀಡಿದ ದೀಪವನ್ನೂ ಹಸ್ತಾಂತರಿಸಿದರು. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ಅರಂತೋಡು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕಿ ಶ್ರೀಮತಿ ಸರಸ್ವತಿಯವರಿಗೆ ವಿದಾಯ ಸಮಾರಂಭ Read More »

ಕರಾವಳಿ

ಕಡಬ: ದೀಪಾವಳಿ ಪ್ರಯುಕ್ತ ಮರ್ಧಾಳದ ‘ಎಲೈಟ್ ಮಂದಿ ಹೋಟೆಲ್’ನಲ್ಲಿ 5 ದಿನಗಳ ಕಾಲ ಭರ್ಜರಿ ಆಫರ್..!

(ನ್ಯೂಸ್ ಕಡಬ) newskadaba.com ಅ. 29. ಇತ್ತೀಚೆಗೆ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪ ಶುಭಾರಂಭಗೊಂಡಿರುವ ಕಡಬ ತಾಲೂಕಿನ ಏಕೈಕ ಮಂದಿ ಬಿರಿಯಾನಿ ಹೋಟೆಲ್ “ಎಲೈಟ್ಸ್ ಮಂದಿ ಹೋಟೆಲ್ & ಜ್ಯೂಸ್ ಪಾಯಿಂಟ್‌” ನಲ್ಲಿ ದೀಪಾವಳಿ ಪ್ರಯುಕ್ತ ಇಂದಿನಿಂದ (ಅ.29) ನ.02ರ ಶನಿವಾರದವರೆಗೆ ಐದು ದಿನಗಳ ಕಾಲ ಭರ್ಜರಿ ಆಫರ್ ನಡೆಯಲಿದೆ. ಫುಲ್ ಅಲ್-ಫಹಮ್ ಮಂದಿ, ಫುಲ್ ಚಿಕನ್ ಲಾಲಿ ಪಾಪ್, ಮಯೋನಿಸ್, ಸಲಾಡ್, 5 ಪರೋಟಾ & ಗ್ರೇವಿ, 1 ltr. Sprite ಕೇವಲ

ಕಡಬ: ದೀಪಾವಳಿ ಪ್ರಯುಕ್ತ ಮರ್ಧಾಳದ ‘ಎಲೈಟ್ ಮಂದಿ ಹೋಟೆಲ್’ನಲ್ಲಿ 5 ದಿನಗಳ ಕಾಲ ಭರ್ಜರಿ ಆಫರ್..! Read More »

ಕರಾವಳಿ

“ವಿಶ್ವ ಸ್ಟ್ರೋಕ್ ದಿನ – ಅಕ್ಟೋಬರ್-29”

(ನ್ಯೂಸ್ ಕಡಬ) newskadaba.com ಅ.29. ಪ್ರತಿ ವರ್ಷ ವಿಶ್ವದಾದ್ಯಂತ ಅಕ್ಟೋಬರ್ 29ರಂದು “ವಿಶ್ವ ಸ್ಟ್ರೋಕ್ ದಿವಸ” ಎಂದು ಆಚರಿಸಿ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸಿ, ಸ್ಟ್ರೋಕ್ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಈ ಸ್ಟ್ರೋಕ್ ಎನ್ನುವುದು ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ, ಯಾವುದೇ ಹೊತ್ತಿನಲ್ಲಿ ಸಂಭವಿಸಬಹುದು. ಪ್ರತೀ ನಾಲ್ಕು ವಯಸ್ಕರಲ್ಲಿ ಒಬ್ಬರಿಗೆ ಜೀವನದಲ್ಲಿ ಒಮ್ಮೆಯಾದರೂ ಸ್ಟ್ರೋಕ್ ಆಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ. ಜಾಗತಿಕವಾಗಿ  ಸಾವಿಗೆ ಅತೀ ಹೃದಯಾಘಾತದ

“ವಿಶ್ವ ಸ್ಟ್ರೋಕ್ ದಿನ – ಅಕ್ಟೋಬರ್-29” Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ.ನಾೈಕ್ ಅವರಿಗೆ ಸನ್ಮಾನ ಸಮಾರಂಭ

(ನ್ಯೂಸ್ ಕಡಬ) newskadaba.com ಅ.29. ಮಂಗಳೂರಿನ ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿರುವ ರೇಷ್ಮ ಮೆಮೋರಿಯಲ್ ಸಭಾಂಗಣದಲ್ಲಿ ಸಂಸ್ಥಾಪಕರಾದ ಡಾ. ಕೆ.ಸಿ.ನಾೈಕ್‍ರವರು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಕರ್ನಾಟಕ, ರುಪ್ಸ ಕರ್ನಾಟಕ ವತಿಯಿಂದ ಶಿಕ್ಷಣ ಭೀಷ್ಮ ಪ್ರಶಸ್ತಿ ಪಡೆದುಕೊಂಡಿರುವುದಕ್ಕಾಗಿ ಶಕ್ತಿ ವಿದ್ಯಾ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಸನ್ಮಾನ ಸಮಾರಂಭವನ್ನು ಆಯೋಜಿಸಲಾಯಿತು. ಈ ಸಮಾರಂಭದಲ್ಲಿ ಶಿಕ್ಷಣ ತಜ್ಞರು ಮತ್ತು ಯುನೈಟೆಡ್ Nation Devolopment Project ಮತ್ತು ಸಂಪನ್ಮೂಲ ವ್ಯಕ್ತಿಗಳು ಆಗಿರುವ ಡಾ. ಎನ್.ಸಂತೋಷ್ ಕುಮಾರ್ ಅವರು

ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ.ನಾೈಕ್ ಅವರಿಗೆ ಸನ್ಮಾನ ಸಮಾರಂಭ Read More »

ಕರಾವಳಿ

ಜಾಗೃತಿ ಅರಿವು ಸಪ್ತಾಹ: ಪ್ರತಿಜ್ಞೆ ಸ್ವೀಕಾರ

(ನ್ಯೂಸ್ ಕಡಬ) newskadaba.com ಅ.29. ರಾಜ್ಯಾದ್ಯಂತ ಅಕ್ಟೋಬರ್ 28ರಿಂದ ನವೆಂಬರ್ 3ರ ವರೆಗೆ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಪ್ರತಿಜ್ಞೆ ಸ್ವೀಕರಿಸಿದರು. ವಾರ್ತಾ ಮತ್ತು ಸರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎ ಖಾದರ್ ಶಾ, ಸಿಬ್ಬಂದಿಗಳಾದ ದಿವ್ಯಾ ಆರ್.ಶೆಟ್ಟಿ, ಅರುಣಾಕಾಂತ, ವೇಣುಗೋಪಾಲ್, ಜೋಗಿ, ರುಚಿತಾ ಪ್ರತಿಜ್ಞೆ ಸ್ಪೀಕರಿಸಿದರು.

ಜಾಗೃತಿ ಅರಿವು ಸಪ್ತಾಹ: ಪ್ರತಿಜ್ಞೆ ಸ್ವೀಕಾರ Read More »

ಕರಾವಳಿ

ಇಂದು ಮಕ್ಕಳ ಸಂಸತ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಅ.29. ಮುಖ್ಯಮಂತ್ರಿಗಳೊಂದಿಗೆ ನವೆಂಬರ್ 14ರಂದು ರಾಜ್ಯಮಟ್ಟದಲ್ಲಿ ನಡೆಯುವ ಮಕ್ಕಳ ಹಕ್ಕುಗಳ ಸಂಸತ್ ನ ಪೂರ್ವಭಾವಿಯಾಗಿ, ದ.ಕ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್-24 ಅಧಿಕಾರಿಗಳೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮ ಅಕ್ಟೋಬರ್ 29ರಂದು ಬೆಳಿಗ್ಗೆ 9.30ರಿಂದ ಕದ್ರಿ ಬಾಲಭವನದಲ್ಲಿ ನಡೆಯಲಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಇಂದು ಮಕ್ಕಳ ಸಂಸತ್ ಕಾರ್ಯಕ್ರಮ Read More »

ಕರಾವಳಿ

ಇಂದು ‘ಮನೋಸ್ಥೆರ್ಯ’ ತರಬೇತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಅ.29. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ “ಮನೋಸ್ಥೆರ್ಯ” ಪ್ರೌಢಶಾಲಾ ಶಿಕ್ಷಕರಿಗೆ ಮಾನಸಿಕ ಆರೋಗ್ಯದ ತರಬೇತಿ ಕಾರ್ಯಗಾರವನ್ನು ಅಕ್ಟೋಬರ್ 29ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಿಲ್ಲಾ ಆರೋಗ್ಯ ಮತ್ತು

ಇಂದು ‘ಮನೋಸ್ಥೆರ್ಯ’ ತರಬೇತಿ ಕಾರ್ಯಗಾರ Read More »

ಕರಾವಳಿ
Scroll to Top