‘ಟಾಕ್ಸಿಗ್’ಗಾಗಿ ಮರಗಳ ಮಾರಣಹೋಮ- ಸೂಕ್ತ ಕ್ರಮಕ್ಕೆ ಮುಂದಾದ ಈಶ್ವರ್ ಖಂಡ್ರೆ
‘ಟಾಕ್ಸಿಗ್’ಗಾಗಿ ಮರಗಳ ಮಾರಣಹೋಮ- ಸೂಕ್ತ ಕ್ರಮಕ್ಕೆ ಮುಂದಾದ ಈಶ್ವರ್ ಖಂಡ್ರೆ Read More »
ವೀಡಿಯೋ(ನ್ಯೂಸ್ ಕಡಬ) newskadaba.com ಅ.30. ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಒಂದು ರಸ್ತೆ ಮಧ್ಯೆಯೇ ಪಲ್ಟಿಯಾದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಬುಧವಾರದಂದು ನಡೆದಿದೆ. ಮಂಗಳೂರಿನಿಂದ ಮಡಿಕೇರಿ ಕಡೆಗೆ ಡೀಸೆಲ್ ಹೊತ್ತೊಯ್ಯತ್ತಿದ್ದ ಟ್ಯಾಂಕರ್ ಬೈತಡ್ಕ ತಿರುವಿನಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿದ್ದು, ಡೀಸೆಲ್ ಸೋರಿಕೆಯಾಗುತ್ತಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಘಟನೆಯಿಂದ ಚಾಲಕನಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಬೈತಡ್ಕ: ಟ್ಯಾಂಕರ್ ಪಲ್ಟಿ- ಡೀಸೆಲ್ ಸೋರಿಕೆ Read More »
ಕರಾವಳಿ, ಕ್ರೈಮ್ ನ್ಯೂಸ್(ನ್ಯೂಸ್ ಕಡಬ) newskadaba.com ಅ. 30. ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಹಲವು ಬಾರಿ ಗಡುವು ನೀಡಿ ವಿಸ್ತರಿಸಲಾಗಿತ್ತು. ಆದರೇ ಇದೀಗ ವಾಹನ ಸವಾರರಿಗೆ ನವೆಂಬರ್.20ರವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಕಾಶ ನೀಡಿ ಆದೇಶಿಸಲಾಗಿದೆ. ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ನೀಡುವಂತೆ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಲಾಗಿತ್ತು. ಹಿರಿಯ ವಕೀಲ ದೇವದತ್ ಕಾಮತ್ ಅವರು ಹೈಕೋರ್ಟ್ ನ್ಯಾಯಪೀಠವನ್ನು ಮತ್ತಷ್ಟು ಕಾಲಾವಕಾಶ ನೀಡುವಂತೆ ಕೋರಿದ್ದರು. ಮನವಿ ಪರಿಗಣಿಸಿದ ನ್ಯಾಯಾಲಯವು ವಿಚಾರಣೆ ಮುಂದೂಡಿಕೆ ಮಾಡಿದ್ದು,
HSRP ನಂಬರ್ ಪ್ಲೇಟ್ ಅಳವಡಿಕೆಗೆ ನ. 20 ಕೊನೆಯ ಅವಕಾಶ..! Read More »
ಕರ್ನಾಟಕ(ನ್ಯೂಸ್ ಕಡಬ) newskadaba.com ಅ. 30. ಇನ್ಮುಂದೆ ಗ್ರಾಮ ಪಂಚಾಯತ್ ಸೇವೆಗಳಿಗೆ ಸಂಬಂಧಿಸಿದಂತೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸದೇ ಕುಳಿತಲ್ಲಿಗೇ ಸೇವೆ ಪಡೆಯಲು ಅರ್ಜಿ ಸಲ್ಲಿಕೆ ವಿಧಾನವನ್ನು ಮತ್ತಷ್ಟು ಸರಳಗೊಳಿಸಲಾಗಿದೆ. ಅದು ಹೇಗಂದ್ರೆ ಜಸ್ಟ್ ಒಂದು ನಂಬರ್ ಗೆ ವಾಟ್ಸಾಪ್ ಮಾಡಿ. ವಾಟ್ಸ್ ಆಪ್ ಮೂಲಕವೇ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ ಪಡೆಯಬಹುದಾಗಿದೆ. ನೀವು 8277506000 ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್ ಚಾಟ್ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ
ಇನ್ಮುಂದೆ ವಾಟ್ಸಪ್ ನಲ್ಲೇ ಸಿಗಲಿವೆ ಗ್ರಾಮ ಪಂಚಾಯತ್ ಸೇವೆಗಳು…! Read More »
ತಂತ್ರಜ್ಞಾನ(ನ್ಯೂಸ್ ಕಡಬ) newskadaba.com ಅ. 30. ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸಿರಿಬಾಗಿಲು ಗ್ರಾಮದ ಮಹಿಳೆಯೋರ್ವರು ಮೃತಪಟ್ಟಿದ್ದು, ಇವರು ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಮೃತಪಟ್ಟವರನ್ನು ಸಿರಿಬಾಗಿಲು ಗ್ರಾಮದ ಪುಲ್ಲೊಟ್ಟೆ ನಿವಾಸಿ ಬಾಬು ಅವರ ಪತ್ನಿ ಲೀಲಾವತಿ (35) ಎಂದು ಗುರುತಿಸಲಾಗಿದೆ. ಕೂಲಿ ಕಾರ್ಮಿಕರಾಗಿದ್ದ ಲೀಲಾವತಿ ಅವರಿಗೆ ನಾಲ್ಕೈದು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಆರಂಭದಲ್ಲಿ ಉದನೆಯ ಕ್ಲಿನಿಕ್ ವೊಂದರಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಜ್ವರ ಹಿನ್ನೆಲೆ ಅ.25ರಂದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು,
ಜ್ವರದಿಂದ ಮಹಿಳೆ ಮೃತ್ಯು- ಡೆಂಗ್ಯೂ ಶಂಕೆ..! Read More »
ಕರಾವಳಿ, ಕ್ರೈಮ್ ನ್ಯೂಸ್(ನ್ಯೂಸ್ ಕಡಬ) newskadaba.com ಅ. 30. ಇದೇ ನವೆಂಬರ್ 13ರಂದು ರಾಜ್ಯದ ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ವಿಧಾನಸಭಾ ಉಪಚುನಾವಣೆ ನಡೆಯಲಿದ್ದು, ಈ ಹಿನ್ನೆಲೆ ಚುನಾವಣಾ ಪ್ರಚಾರ ನಡೆಸಲು ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು, 40 ಜನರ ಸ್ಟಾರ್ ಪ್ರಚಾರಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಚುನಾವಣಾ ಆಯೋಗಕ್ಕೂ ಪಟ್ಟಿಯನ್ನ ರವಾನೆ ಮಾಡಿದ್ದಾರೆ. ಆದರೆ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಅವರನ್ನು ಕೈಬಿಡಲಾಗಿದೆ.
ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ..! Read More »
ಕರ್ನಾಟಕ(ನ್ಯೂಸ್ ಕಡಬ) newskadaba.com ಅ. 30. ಅಡ್ಡೂರು-ಪೊಳಲಿ ಸೇತುವೆ ಮತ್ತು ಉಳಾಯಿಬೆಟ್ಟು ಕಿರು ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಹಾಗೂ ಎರಡೂ ಕಡೆ ಹೊಸ ಸೇತುವೆ ನಿರ್ಮಿಸುವ ಕುರಿತಾಗಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿದರು. ಎರಡೂ ಕಡೆ ಸೇತುವೆಯ ಘನ ವಾಹನ ಸಂಚಾರ ಸ್ಥಗಿತದಿಂದ ಸಾರ್ವಜನಿಕ ಬಸ್ ಸಂಚಾರ ಮತ್ತು ಕಾರ್ಮಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಇತ್ತೀಚೆಗೆ ಪೊಳಲಿ ಮತ್ತು ಉಳಾಯಿಬೆಟ್ಟಿನಲ್ಲಿ
ಹೊಸ ಸೇತುವೆ ನಿರ್ಮಿಸುವ ಕುರಿತು ಜಿಲ್ಲಾಧಿಕಾರಿಯೊಂದಿಗೆ ಸಭೆ..! Read More »
ಕರಾವಳಿ(ನ್ಯೂಸ್ ಕಡಬ) newskadaba.com ಅ. 30. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿದ್ದ ನಟ ದರ್ಶನ್ ಅವರಿಗೆ ಹೈಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿ ಇಂದು 6 ವಾರಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದೆ. ದರ್ಶನ್ ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ದರ್ಶನ್‌ಗೆ ವೈದ್ಯಕೀಯ ವರದಿ ಆಧರಿಸಿಯೇ ಮಧ್ಯಂತರ ಜಾಮೀನು ನೀಡಲಾಗಿದೆ. ಹೀಗಾಗಿ, ದರ್ಶನ್ ಅವರು ಮಂಜೂರಾಗಿರುವ 6 ವಾರಗಳ ಜಾಮೀನನ್ನು ಸಂಪೂರ್ಣವಾಗಿ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ದರ್ಶನ್ ಅವರಿಗೆ ಜಾಮೀನು ಮಂಜೂರು
ಶೂಟಿಂಗ್ ಮಾಡುವಂತಿಲ್ಲ, ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು; ದರ್ಶನ್ ಗೆ ಷರತ್ತು ವಿಧಿಸಿದ ಹೈಕೋರ್ಟ್..! Read More »
ಕರ್ನಾಟಕ(ನ್ಯೂಸ್ ಕಡಬ) newskadaba.com ಅ. 30. ಪಿಲಿಕುಳ ನಿಸರ್ಗಧಾಮದ ಟಿಕೆಟ್ ಕೌಂಟರ್ ಬಳಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಎರಡು ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿಯಾದ ಘಟನೆ ಬುಧವಾರದಂದು ಮುಂಜಾನೆ ನಡೆದಿದೆ. ವರ್ಕ್ ಶಾಪ್ ನಲ್ಲಿ ಚಾರ್ಜ್ ಗೆ ಹಾಕಿದ್ದ ಒಂದು ಎಲೆಕ್ಟ್ರಿಕ್ ವಾಹನದಲ್ಲಿ ಸ್ಪಾರ್ಕ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಘಟನೆಯಲ್ಲಿ ಒಟ್ಟು ಎರಡು ವಾಹನಗಳು ಸಂಪೂರ್ಣ ಭಸ್ಮವಾಗಿದ್ದು, ಪಾರ್ಕಿಂಗ್ ಸ್ಥಳದಲ್ಲಿ ಹತ್ತಕ್ಕೂ ಅಧಿಕ ಬಗ್ಗಿ ಎಲೆಕ್ಟ್ರಿಕ್ ವಾಹನಗಳಿದ್ದವು ಎನ್ನಲಾಗಿದೆ. ಆದರೆ ಅದೃಷ್ಟವಶಾತ್
ಪಿಲಿಕುಳದಲ್ಲಿ ಹೊತ್ತಿ ಉರಿದ 2 ಇಲೆಕ್ಟ್ರಿಕ್ ವಾಹನಗಳು..! Read More »
ಕರಾವಳಿ, ಕ್ರೈಮ್ ನ್ಯೂಸ್(ನ್ಯೂಸ್ ಕಡಬ) newskadaba.com ಅ. 30. ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ 2023 ಮತ್ತು 24ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರಿನ “ಅಭಿಮಾನಿ ಪ್ರಕಾಶನ” ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ “ಸಾಮಾಜಿಕ ಸಮಸ್ಯೆ”ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ “ಅಭಿಮಾನಿ ಪ್ರಶಸ್ತಿ” ಮೈಸೂರಿನ “ಮೈಸೂರು ದಿಗಂತ” ಪತ್ರಿಕಾ ಸಂಸ್ಥೆಯು “ಮಾನವೀಯ ಸಮಸ್ಯೆ”ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ “ಮೈಸೂರು ದಿಗಂತ ಪ್ರಶಸ್ತಿ“, ಬೆಂಗಳೂರಿನ ಅಭಿಮನ್ಯು ಪತ್ರಿಕಾ ಸಂಸ್ಥೆಯು “ದಮನಿತ ಸಮುದಾಯಗಳ ಪರ
ಮಾಧ್ಯಮ ಅಕಾಡೆಮಿಯ ವಿವಿಧ ಪ್ರಶಸ್ತಿಗಳಿಗೆ ಪತ್ರಕರ್ತರಿಂದ ಅರ್ಜಿ ಆಹ್ವಾನ Read More »
ಕರ್ನಾಟಕ