NewsKadaba Team

ಆಗುಂಬೆ ಘಾಟಿಯಲ್ಲಿ ಘನ ವಾಹನ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ಜೂ. 14. ಭಾರೀ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂ ಕುಸಿತ ಆಗುವ ಸಂಭವ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜೂನ್ 15 ರಿಂದ 30ರವರೆಗೆ ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ- ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದು, ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಿದ್ದಾರೆ. ಉಡುಪಿ-ತೀರ್ಥಹಳ್ಳಿಗೆ ಸಂಚರಿಸುವ ಭಾರೀ ವಾಹನಗಳು ಉಡುಪಿ-ಕುಂದಾಪುರ […]

ಆಗುಂಬೆ ಘಾಟಿಯಲ್ಲಿ ಘನ ವಾಹನ ಸಂಚಾರ ನಿಷೇಧ Read More »

ಕರ್ನಾಟಕ
crime, arrest, suspected

ಜೀವಂತ ತಾಯಿಯ ನಕಲಿ ಡೆತ್ ಸರ್ಟಿಫಿಕೇಟ್ ಪಡೆದ ಭೂಪ- ಅರೆಸ್ಟ್..!

(ನ್ಯೂಸ್ ಕಡಬ) newskadaba.com ಜೂ. 14. ತಾಯಿ ಜೀವಂತವಿರುವಾಗಲೇ ಪಾಪಿ ಪುತ್ರನೋರ್ವ ಆಸ್ತಿಗಾಗಿ ಸುಳ್ಳು ಅರ್ಜಿ ನೀಡಿ ತಾಯಿಯ ಡೆತ್ ಸರ್ಟಿಫಿಕೇಟ್ ಪಡೆದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ. ಜೊತೆಗೆ ಮರಣ ಪ್ರಮಾಣಪತ್ರ ನೀಡಿದ ಪುರಸಭೆ ಅಧಿಕಾರಿಗೂ ನೋಟಿಸ್‌ ನೀಡಲಾಗಿದೆ. ಬಂಧಿತ ಆರೋಪಿಯನ್ನು ಶೌಕತ್ ಅಲಿ ಎಂದು ಗುರುತಿಸಲಾಗಿದೆ. ಶೌಕತ್ ಅಲಿ ತಂದೆ ಅವರು 2001 ರಲ್ಲಿ ಮೃತಪಟ್ಟಿದ್ದು, ಪುತ್ರ ಹಾಗೂ ಆತನ ತಾಯಿ ಹೂರಾಂಬಿ ಜಂಗ್ಲಿ ಸಾಬ್ ಎಂಬವರ ಹೆಸರಿನಲ್ಲಿ 2

ಜೀವಂತ ತಾಯಿಯ ನಕಲಿ ಡೆತ್ ಸರ್ಟಿಫಿಕೇಟ್ ಪಡೆದ ಭೂಪ- ಅರೆಸ್ಟ್..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಂಟೇನರ್ ಲಾರಿಗೆ ಬೆಂಕಿ ತಗುಲಿ 10ಕ್ಕೂ ಅಧಿಕ ಫ್ರಿಡ್ಜ್ ಗಳಿಗೆ ಹಾನಿ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ರೆಫ್ರಿಜರೇಟರ್ ಸಾಗಿಸುತ್ತಿದ್ದ ಕಂಟೈನರ್ ಲಾರಿಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ ಘಟನೆ ಕಾಸರಗೋಡು – ಕಾಞಾಂಗಾಡ್ ರಾಜ್ಯ ಹೆದ್ದಾರಿಯ ಕೂವತ್ತೊಟ್ಟಿ ಎಂಬಲ್ಲಿ ನಡೆದಿದೆ. ಲಾರಿಯ ಮೇಲ್ಭಾಗಕ್ಕೆ ವಿದ್ಯುತ್ ತಂತಿ ತಗಲಿದ ಪರಿಣಾಮ ಬೆಂಕಿ ತಗಲಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಕಂಟೈನರ್ ನೊಳಗಿದ್ದ ಹತ್ತಕ್ಕೂ ಅಧಿಕ ರೆಫ್ರಿಜರೇಟರ್ ಭಾಗಶಃ ಹಾನಿಗೊಳಗಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾದರು.

ಕಂಟೇನರ್ ಲಾರಿಗೆ ಬೆಂಕಿ ತಗುಲಿ 10ಕ್ಕೂ ಅಧಿಕ ಫ್ರಿಡ್ಜ್ ಗಳಿಗೆ ಹಾನಿ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗುಜರಿ ಅಂಗಡಿಯಲ್ಲಿ ಅಗ್ನಿ ಅವಘಡ- ಅಪಾರ ಹಾನಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಎರಡು ಅಂಗಡಿಗಳು ಹೊತ್ತಿ ಉರಿದ ಘಟನೆ ಹಂಪನಕಟ್ಟೆಯ ಯುನಿವರ್ಸಿಟಿ ಕಾಲೇಜ್ ಮುಂಭಾಗದಲ್ಲಿ ನಡೆದಿದೆ. ಗುಜಿರಿ ಅಂಗಡಿಯಲ್ಲಿ ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಅದರ ಪಕ್ಕದಲ್ಲಿರುವ ವಸ್ತ್ರ ಮಳಿಗೆಗೂ ಬೆಂಕಿ ಆವರಿಸಿಕೊಂಡಿದೆ. ಘಟನೆಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಬೆಂಕಿಯಿಂದಾಗಿ ಸೊತ್ತು ಹಾನಿಯಾಗಿದೆ. ಸ್ಥಳಕ್ಕೆ ಪಾಂಡೇಶ್ವರ ಅಗ್ನಿಶಾಮಕ ಹಾಗೂ ಬಂಟ್ವಾಳ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಬೆಂಕಿ ಆರಿಸುವಲ್ಲಿ ಹರಸಾಹಸ

ಗುಜರಿ ಅಂಗಡಿಯಲ್ಲಿ ಅಗ್ನಿ ಅವಘಡ- ಅಪಾರ ಹಾನಿ Read More »

ಕರಾವಳಿ, ಕ್ರೈಮ್ ನ್ಯೂಸ್

ಸರ್ಜರಿ ಇಲ್ಲದೆ ವಕ್ರಪಾದ ಸಮಸ್ಯೆ ನಿವಾರಣೆ – ಡಾ.ಕೆ.ಆರ್ ಕಾಮತ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ವೈದ್ಯಕೀಯ ತಂತ್ರಜ್ಞಾನದ ಪ್ರಗತಿಯಿಂದ ಸರ್ಜರಿ ರಹಿತವಾಗಿ ಮಕ್ಕಳಲ್ಲಿ ವಕ್ರಪಾದ ದೋಷವನ್ನು ಸರಿಪಡಿಸಬಹುದಾಗಿದೆ ಎಂದು ವೆನ್‍ಲಾಕ್ ಆಸ್ಪತ್ರೆಯ ಎಲುಬು ಮತ್ತು ಕೀಳು ತಜ್ಞ ಡಾ.ಕೆ.ಆರ್ ಕಾಮತ್ ತಿಳಿಸಿದ್ದಾರೆ. ಅವರು ವೆನ್‍ಲಾಕ್ ಆಸ್ಪತ್ರೆಯಲ್ಲಿ ವಿಶ್ವ ವಕ್ರಪಾದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹುಟ್ಟುವ ಪ್ರತಿ ಸಾವಿರ ಮಕ್ಕಳಲ್ಲಿ 1-3 ಮಕ್ಕಳಲ್ಲಿ ವಕ್ರಪಾದ ಸಮಸ್ಯೆ ಕಂಡುಬರುತ್ತಿದೆ. ವೆನ್‍ಲಾಕ್ ಆಸ್ಪತ್ರೆಯಲ್ಲಿ ಇದಕ್ಕೆ ಉಚಿತವಾಗಿ ಪ್ರತಿ ಗುರುವಾರ ವಿಶೇಷ ಚಿಕಿತ್ಸೆ ನೀಡಲಾಗುತ್ತದೆ. ಕಳೆದ ಹತ್ತು ವರ್ಷದಲ್ಲಿ 500ಕ್ಕೂ

ಸರ್ಜರಿ ಇಲ್ಲದೆ ವಕ್ರಪಾದ ಸಮಸ್ಯೆ ನಿವಾರಣೆ – ಡಾ.ಕೆ.ಆರ್ ಕಾಮತ್ Read More »

ಕರಾವಳಿ

ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಸ್ಟೆಲ್ ಸಹಿತ ಪರೀಕ್ಷಾ ಪೂರ್ವ ತರಬೇತಿ ಅಥವಾ ಶಿಷ್ಯವೇತನದೊಂದಿಗೆ ಪ್ರತಿಷ್ಠಿತ ಸಂಸ್ಥೆಯ ಮೂಲಕ 3 ತಿಂಗಳ ಯು.ಪಿ.ಎಸ್.ಸಿ (UPSಅ) ಮುಖ್ಯ ಪರೀಕ್ಷಾ ತರಬೇತಿ ನೀಡಲಾಗುತ್ತಿದ್ದು, ತರಬೇತಿಗೆ ಅರ್ಹ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್  21 ಕೊನೆಯ ದಿನ. ತರಬೇತಿ ಬೆಂಗಳೂರಿನಲ್ಲಿ ನಡೆಯಲಿದೆ. ಅರ್ಜಿದಾರರು ಅಲ್ಪಸಂಖ್ಯಾತರ ನಿರ್ದೇಶನಾಲಯದ ವೆಬ್‍ಸೈಟ್ https://dom.karnataka.gov.in

ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ: ಅರ್ಜಿ ಆಹ್ವಾನ Read More »

ಕರಾವಳಿ

ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಉಚಿತ ಅಲ್ಪಾವಧಿ ಕೌಶಲ್ಯ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ.)ಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿಸ್ಕೊ ಸರ್ಟಿಫೈಡ್ ನೆಟ್‍ವರ್ಕ್ ಅಸೋಸಿಯೇಟ್ (ಸಿ.ಸಿ.ಎನ್.ಎ), ಸಿಸ್ಕೊ ಐ.ಟಿ. ಎಸೆನ್ಸಿಯಲ್ಸ್, ಬೇಸಿಕ್ ವೆಲ್ಡಿಂಗ್, ಟಿಗ್ ವೆಲ್ಡಿಂಗ್, ಮಿಗ್ ವೆಲ್ಡಿಂಗ್, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್, ಟ್ಯಾಲಿ ಪ್ರೈಮ್ ಹಾಗೂ ಕಾರ್ಕಳದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿರುವ ಕೆಜಿಟಿಟಿಐ ವಿಸ್ತರಣಾ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಸಿ.ಎನ್.ಸಿ

ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಉಚಿತ ಅಲ್ಪಾವಧಿ ಕೌಶಲ್ಯ ತರಬೇತಿ Read More »

ಕರಾವಳಿ

ಜೂನ್ 18 ರಂದು ಲೀಡ್ ಬ್ಯಾಂಕ್ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ಲೀಡ್ ಬ್ಯಾಂಕ್ ಯೋಜನೆಗಳ ಜಿಲ್ಲಾ ಸಲಹಾ ಸಮಿತಿ ಸಭೆಯು ಜೂನ್ 18ರಂದು ಬೆಳಿಗ್ಗೆ 10:30 ಗಂಟೆಗೆ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ 11:30 ಗಂಟೆಗೆ ದಕ್ಷಿಣ ಕನ್ನಡ ಲೋಕಸಭೆ ಸದಸ್ಯ ಕ್ಯಾ.ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ ಸಭೆಯಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಜೂನ್ 18 ರಂದು ಲೀಡ್ ಬ್ಯಾಂಕ್ ಸಭೆ Read More »

ಕರಾವಳಿ

ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ಹೋಟೆಲ್,ವಸತಿ ಗೃಹ, ಬಾರ್ & ರೆಸ್ಟೋರೆಂಟ್‍ಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು/ಆಹಾರ ಒದಗಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ ಸೂಚಿಸಿದ್ದಾರೆ. ಅವರು ಜಿಲ್ಲಾ ಪಂಚಾಯತ್‍ನಲ್ಲಿ ಗುರುವಾರ ನಡೆದ ಜಿಲ್ಲಾ ಕಣ್ಗಾವಲು ಮತ್ತು ಕಾರ್ಯಕಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಡಿಯುವ ನೀರಿನ ಮಾದರಿಯನ್ನು ಕಾಲಕಾಲಕ್ಕೆ ಪರೀಕ್ಷಿಸಿ ಗುಣಮಟ್ಟವನ್ನು ದೃಢೀಕರಿಸಿ ಶುದ್ಧೀಕರಣಕ್ಕೆ ಬೇಕಾದ ಮೌಲ್ಯಮಾಪನಾ ಕ್ರಮಗಳನ್ನು ಅನುಸರಿಸಿ,

ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಸೂಚನೆ Read More »

ಕರಾವಳಿ, ಕರ್ನಾಟಕ

ಮೀನುಗಾರರಿಗೆ ಮನೆ ನಿರ್ಮಾಣ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ಮೀನುಗಾರಿಕೆ ಇಲಾಖೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ‘ಮತ್ಸ್ಯಾಶ್ರಯ’ ಯೋಜನೆಯಡಿ ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಾಣ ಮಾಡಲು ಸಹಾಯಧನ ನೀಡುವ ಕುರಿತು ಒಟ್ಟು 200 ಮನೆಗಳು ಹಂಚಿಕೆಯಾಗಿರುತ್ತದೆ. ಈ ಬಗ್ಗೆ ಅರ್ಹ ವಸತಿ ರಹಿತ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಗರದ ಉರ್ವಾಸ್ಟೋರ್ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಮೀನುಗಾರಿಕೆ ಸಹಾಯಕ ನಿರ್ದೇಶಕರು ಅಥವಾ ಪುತ್ತೂರು ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿರುವ ಮೀನುಗಾರಿಕೆ ಸಹಾಯಕ

ಮೀನುಗಾರರಿಗೆ ಮನೆ ನಿರ್ಮಾಣ: ಅರ್ಜಿ ಆಹ್ವಾನ Read More »

ಕರಾವಳಿ
Scroll to Top