ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗಡಿಯಾರ ಶಾಲೆಗೆ ಬೆಂಚ್ ಮತ್ತು ಡೆಸ್ಕ್ ವಿತರಣೆ

(ನ್ಯೂಸ್ ಕಡಬ) newskadaba.com ಡಿ. 24. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,
ಪೆರ್ನೆ ವಲಯದ ಕೆದಿಲ ಕಾರ್ಯಕ್ಷೇತ್ರದ ಸಹಕಾರದೊಂದಿಗೆ ಕೆದಿಲದ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಿಂದ ಶಾಲಾ ಮಕ್ಕಳಿಗೆ 7 ಡೆಸ್ಕ್ ಮತ್ತು 7 ಬೆಂಚನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪುಟ್ಟ ರಂಗನಾಥ ಮತ್ತು ಅಧ್ಯಾಪಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಇವರಿಗೆ ಪೆರ್ನೆ ವಲಯ ಮೇಲ್ವಿಚಾರಕರಾದ ಶಾರದಾರವರು ವಿತರಿಸಿದರು.

Nk Cake House

ಈ ಸಂದರ್ಭದಲ್ಲಿ ಕೆದಿಲ “ಬಿ” ಒಕ್ಕೂಟದ ಅಧ್ಯಕ್ಷರಾದ ಮೀನಾಕ್ಷಿ, ಉಪಾಧ್ಯಕ್ಷರಾದ ಸುಂದರ, ಸೇವಾ ಪ್ರತಿನಿಧಿ ಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲದ ಸದಸ್ಯರಾದ ಜಗದೀಶ ಹಾಗೂ ಗಿರೀಶ ಉಪಸ್ಥಿತರಿದ್ದರು.

error: Content is protected !!
Scroll to Top