(ನ್ಯೂಸ್ ಕಡಬ) newskadaba.com ಡಿ. 23 ಬಾಗಲಕೋಟೆ: ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದ್ದ ವ್ಯಕ್ತಿಯನ್ನು ಥಳಿಸಿ, ಕರೆಂಟ್ ಶಾಕ್ ನೀಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಶಾಕಿಂಗ್ ಘಟನೆ ಅಬಕಾರಿ ಸಚಿವರ ತವರಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಐವರು ಸೇರಿ ಒಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ. ವೆಂಕರೆಡ್ಡಿ ಶೇಷಪ್ಪನವರ(40) ಕೊಲೆಯಾದ ವ್ಯಕ್ತಿ. ಐವರು ಸೇರಿ ದೊಣ್ಣೆಗಳಿಂದ ಹಲ್ಲೆ ನಡೆಸಿ ಕರೆಂಟ್ ಶಾಕ್ ನೀಡಿದ್ದಾರೆ. ಈ ಕೊಲೆ ಕೇಸ್ನಲ್ಲಿ ಐವರು ಆರೋಪಿಗಳನ್ನು ಕೆರೂರು ಪೊಲೀಸರು ಬಂಧಿಸಿದ್ದಾರೆ. ಹನುಮಂತ ನೀಲರ್, ಪತ್ನಿ ಶೈಲಾ ನೀಲರ್, ಪರ್ವತಗೌಡ ಮುದಿಗೌಡ್ರ ಪುಟ್ಟಪ್ಪ ಮುದಿಗೌಡ್ರ, ಸಿದ್ದಪ್ಪ ನೀಲಗೌಡ್ರ ಬಂಧಿತ ಅರೋಪಿಗಳು.ಬಂಧಿತ ಆರೋಪಿ ಹನುಮಂತ ನೀಲರ್ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಮದ್ಯ ಸೇವಿಸಿ ವೆಂಕರೆಡ್ಡಿ ಮನೆ ಮುಂದೆ ಪ್ಯಾಕೆಟ್ ಬಿಸಾಡಿ ಹೋಗುತ್ತಿದ್ದರು. ಜೊತೆಗೆ ಕುಡಿದ ಅಮಲಿನಲ್ಲಿ ಕೆಲವರು ವೆಂಕರೆಡ್ಡಿ ಮನೆ ಮುಂದೆ ಜಗಳವಾಡುತ್ತಿದ್ದರು. ಹೀಗಾಗಿ ನಮ್ಮ ಮನೆ ಬಳಿ ಮದ್ಯ ಮಾರಬೇಡಿ ಎಂದು ವೆಂಕರೆಡ್ಡಿ ಹೇಳಿದ್ದರು.
ಈ ವಿಚಾರವಾಗಿ ಡಿ.21ರಂದು ವೆಂಕರೆಡ್ಡಿ ಮೇಲೆ ಐವರ ಗ್ಯಾಂಗ್ ಹಲ್ಲೆ ನಡೆಸಿ ಕರೆಂಟ್ ಶಾಕ್ ನೀಡಿದೆ. ಗಾಯಾಳು ವೆಂಕರೆಡ್ಡಿಯನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತ. ನಂತರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದರೂ ಚಿಕಿತ್ಸೆ ಫಲಿಸದೆ ವೆಂಕರೆಡ್ಡಿ ಸಾವನ್ನಪ್ಪಿದ್ದಾರೆ.