ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಡಿ. 23 ಸುಳ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಭಾನುವಾರ ಸಂಜೆ ನಡುಗಲ್ಲು ಸಮೀಪ ನಡೆದಿದೆ.

ಸುಳ್ಯ ಕಡೆಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಪಾವಂಜೆಯ ರವಿಪ್ರಸಾದ್ ಮತ್ತು ಅವರ ಮನೆಯವರಿದ್ದ ಕಾರು ಸುಬ್ರಹ್ಮಣ್ಯ-ಜಾಲ್ಸೂರು ರಸ್ತೆಯ ನಡುಗಲ್ಲು ಬಳಿ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ಮಣ್ಣಿನ ಬರೆಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

Nk Cake House

ಸ್ಥಳೀಯರು ಕಾರಿನಲ್ಲಿದ್ದ ರವಿಪ್ರಸಾದ್, ಅವರ ಪತ್ನಿ ಮತ್ತು ಮಗುವನ್ನು ರಕ್ಷಿಸಿದ್ದಾರೆ. ರವಿಪ್ರಸಾದ್ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Scroll to Top