ರಸ್ತೆ ಅಪಘಾತ: 6 ವರ್ಷದ ಬಾಲಕಿ ಮೃತ್ಯು..!



(ನ್ಯೂಸ್ ಕಡಬ) newskadaba.com ಮಡಿಕೇರಿ, . 28. ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದ ಮಜ್ಜಿಗೆಹಳ್ಳ ನರ್ಸರಿ ಬಳಿ ನಡೆದಿದೆ.







ಮೃತ ದುರ್ದೈವಿಯನ್ನು ಸ್ಥಳೀಯ ನಿವಾಸಿ ರವಿ ಹಾಗೂ ಸಿಂಧು ದಂಪತಿ ಪುತ್ರಿ ಗಾನವಿ(6) ಎಂದು ಗುರುತಿಸಲಾಗಿದೆ. ಈಕೆ ಮಜ್ಜಿಗೆಹಳ್ಳ ಪರಂಬು ಶಾಲೆಯ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗೋಣಿಕೊಪ್ಪ ಕಡೆಯಿಂದ ಹುಣಸೂರು ಕಡೆಗೆ ತೆರಳುತ್ತಿದ್ದ ಲಾರಿ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಗಾನವಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿ ಢಿಕ್ಕಿ ಹೊಡೆದ ಸಂದರ್ಭ ಗಂಭೀರ ಗಾಯಗೊಂಡಿದ್ದ ಗಾನವಿಯನ್ನು ಸಾರ್ವಜನಿಕರು ಆಟೋ ರಿಕ್ಷಾದಲ್ಲಿ ತಿತಿಮತಿ ವಿವೇಕಾನಂದ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಳು ಎಂದು ತಿಳಿದು ಬಂದಿದೆ. ಈ ಅಪಘಾತ ಘಟನೆ ಕುರಿತು ತಿತಿಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

 

error: Content is protected !!
Scroll to Top