ಸ್ಫೋಟಕ ಡ್ರೋನ್‌ಗಳ ಪರೀಕ್ಷಿಸಿದ ಉತ್ತರ ಕೊರಿಯಾ

(ನ್ಯೂಸ್ ಕಡಬ) newskadaba.com . 14. ಉತ್ತರ ಕೊರಿಯಾವು ಗುರಿಗಳಿಗೆ ಅಪ್ಪಳಿಸಲು ವಿನ್ಯಾಸಗೊಳಿಸಲಾದ ಸ್ಫೋಟಕ ಡ್ರೋನ್‌ಗಳನ್ನು ಪರೀಕ್ಷಿಸಿದೆ ಮತ್ತು ಶಸಾ್ತ್ರಸ್ತ್ರಗಳ ಸಾಮೂಹಿಕ ಉತ್ಪಾದನೆಯನ್ನು ವೇಗಗೊಳಿಸಲು ನಾಯಕ ಕಿಮ್‌ ಜಾಂಗ್‌ ಉನ್‌ ಕರೆ ನೀಡಿದ್ದಾರೆ ಎಂದು ವರದಿಯಾಗಿದೆ.


ಕನಿಷ್ಟ ಎರಡು ವಿಭಿನ್ನ ರೀತಿಯ ಮಾನವರಹಿತ ವೈಮಾನಿಕ ವಾಹನಗಳ ಬಳಿ ಕಿಮ್‌ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವ ಫೋಟೋಗಳನ್ನು ಅಲ್ಲಿನ ಮಾಧ್ಯಮಗಳು ಪ್ರಕಟಿಸಿವೆ. ಅವು ಎಕ್ಸ್ -ಆಕಾರದ ಬಾಲಗಳು ಮತ್ತು ರೆಕ್ಕೆಗಳನ್ನು ಹೊಂದಿವೆ. ಡ್ರೋನ್‌ಗಳು ವಿವಿಧ ಮಾರ್ಗಗಳಲ್ಲಿ ಹಾರಿದವು ಮತ್ತು ಗುರಿಗಳನ್ನು ನಿಖರವಾಗಿ ಹೊಡೆದವು ಎಂದು ಕೆಸಿಎನ್‌ಎ ತಿಳಿಸಿದೆ.

Also Read  ವಿಶ್ವ ಪರಿಸರ ದಿನಾಚರಣಾ ಕಾರ್ಯಕ್ರಮ

 

error: Content is protected !!
Scroll to Top