(ನ್ಯೂಸ್ ಕಡಬ) newskadaba.com ಮುಂಬೈ, ನ. 15. ಭಾರತೀಯರಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತು ಕೆನಡಾದಂಥ ದೇಶಗಳಿಗೆ ವಲಸೆ ಹೋಗುವ ಪ್ರವೃತ್ತಿಯು ಹೆಚ್ಚಿದ್ದು, 2022ರಲ್ಲಿ ಒಟ್ಟು 5.6 ಲಕ್ಷ ಮಂದಿ ಈ ಸಮೃದ್ಧ ದೇಶಗಳಿಗೆ ವಲಸೆ ಹೋಗಿದ್ದಾರೆ.
ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ದೇಶಗಳ ಹೊಸ ವಲಸೆಗಾರರಾಗಿ, ಅಂತರಾಷ್ಟ್ರೀಯ ವಿದ್ಯಾರ್ಥಿಗಳಾಗಿ, ಪೌರತ್ವ ಪಡೆದವರ ಪಟ್ಟಿಯಲ್ಲಿ ಭಾರತೀಯರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಆದರೆ ಈ ದೇಶಗಳು ಪ್ರಸ್ತುತ ಅನುಸರಿಸುತ್ತಿರುವ ರಕ್ಷಣಾತ್ಮಕ ನೀತಿಯಿಂದಾಗಿ ಈ ಮುಕ್ತ ಮಾರ್ಗ ಕಿರಿದಾಗುತ್ತಿದೆ. 2022ರಲ್ಲಿ 5.6 ಲಕ್ಷ ಮಂದಿ ಓಇಸಿಡಿ ದೇಶಗಳ ವಲಸೆಗಾರರ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಚೀನಾದಿಂದ 3.2 ಲಕ್ಷ ಮಂದಿ ವಲಸೆ ಬಂದಿದ್ದಾರೆ. ಒಇಸಿಡಿ ದೇಶಗಳ ಹೊಸ ವಲಸೆಗಾರರ ಪೈಕಿ ಭಾರತೀಯರ ಪಾಲು ಶೇಕಡ 6.4ರಷ್ಟಿದ್ದರೆ, ಚೀನಾ ಪಾಲು ಶೇಕಡ 3.8ರಷ್ಟು. 2.68 ಲಕ್ಷ ಮಂದಿಯೊಂದಿಗೆ ರಷ್ಯಾ ಮೂರನೇ ಸ್ಥಾನದಲ್ಲಿದೆ.