ಯೂನಿಯನ್ ಬ್ಯಾಂಕ್ ನಲ್ಲಿ 1500 ಹುದ್ದೆಗಳು- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ನ. 09. ಯೂನಿಯನ್ ಬ್ಯಾಂಕ್ ನಲ್ಲಿ 1,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಮುಂಬರುವ 13ನೇ ತಾರೀಖಿನೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು.

 

ಇದರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 24ರಿಂದ ಆರಂಭವಾಗಿದ್ದು, ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು 20 ರಿಂದ 30 ವರ್ಷದೊಳಗಿರಬೇಕು.

ಸರ್ಕಾರಿ ನಿಯಮಗಳ ಪ್ರಕಾರ, ಹಿಂದುಳಿದ ವರ್ಗದವರಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ವಿನಾಯಿತಿ ನೀಡಲಾಗುವುದು. ಅಭ್ಯರ್ಥಿಗಳು ಯಾವ ರಾಜ್ಯಕ್ಕೆ ಸಲ್ಲಿಸುತ್ತಾರೋ ಅಲ್ಲಿಯ ಪ್ರಾದೇಶಿಕ ಭಾಷೆಯನ್ನು ತಿಳಿದವರಾಗಿರಬೇಕು.

ಅರ್ಜಿ ಸಲ್ಲಿಕೆ ಶುಲ್ಕ
General/ EWS/OBC ಅಭ್ಯರ್ಥಿಗಳಿಗೆ 850 ರೂಪಾಯಿ ಜೊತೆಗೆ ಜಿಎಸ್‌ಟಿ
SC/ST/PwBD ಅಭ್ಯರ್ಥಿಗಳಿಗೆ 175 ರೂಪಾಯಿ
ಜಿಎಸ್‌ಟಿ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್‌ನೆಟ್ ಬ್ಯಾಂಕಿಂಗ್/ಎಂಪಿಎಸ್/ ಕ್ಯಾಶ್ ಕಾರ್ಡ್/ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಶುಲ್ಕ ಪಾವತಿಸಬೇಕು.

Also Read  ಎಡೆಬಿಡದೆ ಸುರಿದ ಮಳೆರಾಯ ➤ ಕುಮಾರಧಾರಾ ನೀರಿನ ಮಟ್ಟದಲ್ಲಿ ಏರಿಕೆ

ವಯೋಮಿತಿ
ಕನಿಷ್ಠ: 20 ವರ್ಷ
ಗರಿಷ್ಠ: 30 ವರ್ಷ

ಭಾರತ ಸರ್ಕಾರ ಅಥವಾ ಅದರ ಮೂಲಕ ಗುರುತಿಸಲ್ಪಟ್ಟ ನಿಯಂತ್ರಣ ಸಂಸ್ಥೆಗಳಿಂದ ಯಾವುದಾದರೂ ಒಂದು ಪೂರ್ಣಾವಧಿ/ರೆಗ್ಯೂಲರ್ ಬ್ಯಾಚುಲರ್ ಪದವಿ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪಡೆದುಕೊಂಡಿರಬೇಕು. ಅಭ್ಯರ್ಥಿಯು ಮಾನ್ಯವಾದ ಮಾರ್ಕ್-ಶೀಟ್ ಮತ್ತು ಪದವೀಧರ ಎಂಬ ಪದವಿ ಪ್ರಮಾಣಪತ್ರ ಹೊಂದಿರಬೇಕು. ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವಾಗ ಅಂಕಗಳನ್ನು ನಮೂದಿಸಬೇಕು.

ಯಾವ ರಾಜ್ಯದಲ್ಲಿ ಎಷ್ಟು ಹುದ್ದೆ?
ಆಂಧ್ರ ಪ್ರದೇಶ- 200
ಗುಜರಾತ್- 200
ಅಸ್ಸಾಂ- 50
ಕರ್ನಾಟಕ- 300
ಕೇರಳ- 100
ಮಹಾರಾಷ್ಟ್ರ – 50
ಓಡಿಶಾ- 100
ತಮಿಳನಾಡು- 200
ತೆಲಂಗಾಣ- 200
ಪಶ್ಚಿಮ ಬಂಗಾಳ- 100

Also Read  ಸುಳ್ಯ: ಮಂಡೆಕೋಲು ಸಹಕಾರಿ ಸಂಘಕ್ಕೆ ಸ್ಕ್ಯಾಡ್ಸ್ ಪ್ರಶಸ್ತಿ

ಅರ್ಜಿ ಸಲ್ಲಿಸಲು ಬಯಸುವ ಆಸಕ್ತರು ಈ https://ibpsonline.ibps.in/ubilbooct24/ ಮೂಲಕ ಅಪ್ಲೈ ಮಾಡಬಹುದು.

error: Content is protected !!
Scroll to Top