ಶಿಕ್ಷಣಕ್ಕಾಗಿ RTE ಕಾಯ್ದೆಯಡಿ ಅರ್ಜಿ ಸಲ್ಲಿಸಲು ಬಾಕಿಯಿರುವ ಪೋಷಕರಿಗೆ ಸಿಹಿ ಸುದ್ದಿ ► ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.22. ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳನ್ನು ಶಾಲೆಗೆ ಸೇರಿಸಲು ಸಾಧ್ಯವಾಗದೇ ಇರುವ ಪೋಷಕರಿಗೆ ಸಿಹಿ ಸುದ್ದಿಯೊಂದು ದೊರೆತಿದ್ದು, ಅರ್ಜಿ ಸಲ್ಲಿಕೆಯ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.

2018-19 ನೇ ಸಾಲಿನಲ್ಲಿ RTE ಅಡಿ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ 1.44 ಲಕ್ಷ ಸೀಟುಗಳನ್ನು ಕಾಯ್ದಿರಿಸಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಶೇ.25 ರಷ್ಟು ಸೀಟುಗಳಿಗೆ ಉಚಿತವಾಗಿ ಪ್ರವೇಶ ನೀಡುವ ಬಗ್ಗೆ ಆರ್ ಟಿಇ ವೇಳಾಪಟ್ಟಿಯನ್ನು ಪ್ರಕಟಿಸಿ, ಫೆಬ್ರವರಿ 20 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಮಾರ್ಚ್ 21 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತಾದರೂ, ಪೋಷಕರ ಅನುಕೂಲಕ್ಕಾಗಿ ಕಾಲಾವಕಾಶವನ್ನು ಮಾರ್ಚ್ 28 ರವರೆಗೆ ದಿನಾಂಕವನ್ನು ವಿಸ್ತರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.

Also Read  ರಸ್ತೆ ದುರಸ್ತಿಗೆ ರೂ.2.69 ಕೋಟಿ ಅನುದಾನ ಬಿಡುಗಡೆ  ➤ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್  

 

ಏಪ್ರಿಲ್ 2 ರಂದು ಲಾಟರಿ ಪ್ರಕ್ರಿಯೆ ಅರ್ಹತಾ ಸುತ್ತಿನ ಪಟ್ಟಿ ಪ್ರಕಟವಾಗಲಿದೆ. ಎಪ್ರಿಲ್ 06 ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ. ಏಪ್ರಿಲ್ 07 ರಿಂದ 17 ರವರೆಗೆ ಮೊದಲ ಸುತ್ತಿನ ದಾಖಲಾತಿ ನಡೆಯಲಿದೆ. ಏಪ್ರಿಲ್ 26 ರಂದು 02 ನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದ್ದು, ಏಪ್ರಿಲ್ 27 ರಿಂದ ಮೇ 05 ರವರೆಗೆ 02 ನೇ ಸುತ್ತಿನ ದಾಖಲಾತಿ ನಡೆಯಲಿದೆ. ಮೇ 14 ರಂದು 03 ನೇ ಸುತ್ತಿನ ಸೀಟು ಹಂಚಿಕೆ ಮಾಡಲಿದ್ದು, ಮೇ 16 ರಿಂದ 22 ರವರೆಗೆ 03 ನೇ ಸುತ್ತಿನ ದಾಖಲಾತಿ ನಡೆಯಲಿದೆ. ಪೋಷಕರು ಫೆಬ್ರವರಿ 20 ರಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಮಗು, ಪೋಷಕರ ಆಧಾರ್ ಕಾರ್ಡ್ ಇರಬೇಕು. ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಉಚಿತವಾಗಿ ಸರ್ಜಿ ಸಲ್ಲಿಸಬಹುದಾಗಿದೆ.

Also Read  ಗಡಿಯಲ್ಲಿ ಪೊಲೀಸರ ಸರ್ಪಗಾವಲು ➤ 142 ಕೆಜಿ ಬೆಳ್ಳಿ ಕಾಲುಂಗುರ ವಶ, ಎಫ್​ಐಆರ್ ದಾಖಲು

error: Content is protected !!
Scroll to Top