ಹಿಂದುಳಿದ ವರ್ಗಗಳ ವಿದ್ಯಾರ್ಥಿವೇತನ : ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ನ. 06. ಪಿಯುಸಿ ಮತ್ತು ಪದವಿ ಮತ್ತು ಸಂಯೋಜಿತ ಉಭಯ ಪದವಿ ಕೋರ್ಸುಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ ಅರೆಅಲೆಮಾರಿ ವಿದ್ಯಾರ್ಥಿಗಳಿಗೆ 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಮೆಟ್ರಿಕ್-ನಂತರದ ವಿದ್ಯಾರ್ಥಿ ವೇತನ”, “ಶುಲ್ಕ ಮರುಪಾವತಿ” ಮತ್ತು “ವಿದ್ಯಾಸಿರಿ (ಊಟ ಮತ್ತು ವಸತಿ ಸಹಾಯ ಯೋಜನೆ)”, ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 10ರ ವರೆಗೆ ಅವಧಿ ವಿಸ್ತರಿಸಲಾಗಿದೆ.

ವಿದ್ಯಾರ್ಥಿ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್‍ಸೈಟ್ ssp.postmatric.karnataka.gov.in/ ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಬಗ್ಗೆ ಮಾಹಿತಿಗಾಗಿ ಭೇಟಿ ನೀಡಬೇಕಾದ ವೆಬ್‍ಸೈಟ್ ವಿಳಾಸ bcwd.karnataka.gov.in ಇಲಾಖಾ ಸಹಾಯವಾಣಿ ದೂರವಾಣಿ ಸಂಖ್ಯೆ 8050770005, ಇಮೇಲ್ : bcwdhelpline@gmail.com ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ 1902, ಇಮೇಲ್: postmatrichelp@karnataka.gov.in  ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top