(ನ್ಯೂಸ್ ಕಡಬ) newskadaba.com ನ. 05 ಬಂಟ್ವಾಳ: ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿಯನ್ನು ದೇವಲದ ಬಾಗಿಲು ಮುರಿದು ಖದೀಮರು ಕಳ್ಳತನ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಸುಜೀರು ಎಂಬಲ್ಲಿರುವ ಶ್ರೀದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ನಡೆದಿದೆ.
ಕಳ್ಳತನದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಂಜಾನೆ 4 ಗಂಟೆಗೆ ದೇವಸ್ಥಾನದ ಬಾಗಿಲು ಮುರಿದು ನೂರಾರು ವರ್ಷಗಳ ಹಳೆಯದಾದ ಒಂದೂವರೆ ಕೆ.ಜಿ.ತೂಕದ ಬೆಳ್ಳಿಯ ದೇವರ ಪೀಠ, ಬಂಗಾರದ ದೇವರ ಮೂಗುತಿ, ದೇವರ ಕೊಡೆ ಸೇರಿ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ ಹಾಗೂ 3 ಪವನ್ ಚಿನ್ನ ಕಳವು ಜೊತೆಗೆ ಕಾಣಿಕೆ ಹುಂಡಿಯಲ್ಲಿದ್ದ 2.30 ಲಕ್ಷ ನಗದು ಎಗರಿಸಿದ್ದಾರೆ ಕಳ್ಳರು.