ವಕ್ಫ್ ಬೋರ್ಡ್ ವಿರುದ್ದ ಪ್ರಧಾನಿಗೆ ಪತ್ರ ಬರೆದ ಯತ್ನಾಳ್..!

(ನ್ಯೂಸ್ ಕಡಬ) newskadaba.com ನ. 01.  ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಂದು ಪಾಕಿಸ್ತಾನ ಸೃಷ್ಟಿಯಾಗಲು ಬಿಡಬಾರದು. ಆ ಕಾರಣದಿಂದ ನಾನು ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ. ಈ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡಿ ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಬೇಕು. ಇಲ್ಲವಾದರೆ ರೈತರು, ಮಠ-ಮಂದಿರಗಳು, ಗ್ರಾಮಗಳನ್ನು ವಕ್ಫ್ ಎನ್ನಲಾಗುತ್ತದೆ. ನೆಹರು, ಗಾಂಧಿ ಮಾಡಿದ ವಕ್ಫ್ ಕರಾಳ ಶಾಸನ, ಪಾಪದ ಕೊಡ ಇಡೀ ಭಾರತವನ್ನೇ ನುಂಗುತ್ತಿದೆ. ಎಲ್ಲಾ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡಿ ಸಾರ್ವಜನಿಕರಿಗೆ, ಹಿಂದುಳಿದ ದಲಿತ ಜನಾಂಗದ ಅಭಿವೃದ್ದಿಗೆ ಉಪಯೋಗ ಮಾಡಬೆಕು ಎಂದು ಹೇಳಿದರು

Scroll to Top