ಫೆಬ್ರವರಿ 16ರಂದು ಹಸೆಮಣೆ ಏರಲಿರುವ ಡಾಲಿ ಧನಂಜಯ್..!

(ನ್ಯೂಸ್ ಕಡಬ) newskadaba.com ನ. 01. ಸ್ಯಾಂಡಲ್‌ ವುಡ್‌ ಸ್ಟಾರ್ ನಟ ಡಾಲಿ ಧನಂಜಯ್ ಅವರು 2025ರ ಫೆಬ್ರವರಿಯಲ್ಲಿ ಹಸೆಮಣೆ ಏರಲಿದ್ದಾರೆ. ಈ ಮೂಲಕ ದೀಪಾವಳಿ ಹಬ್ಬಕ್ಕೆ ನಟ ಧನಂಜಯ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟಿದ್ದಾರೆ.

ನಟ ಧನಂಜಯ್ ಮದುವೆಯಾಗುತ್ತಿರುವ ಹುಡುಗಿ ಮೂಲತಃ ಚಿತ್ರದುರ್ಗದ ಧನ್ಯತಾ ಚಿತ್ರರಂಗದವರಲ್ಲ. ಬದಲಾಗಿ ಧನಂಜಯ್ ಅವರ ಭಾವಿ ಪತ್ನಿ ಸ್ತ್ರೀರೋಗ ತಜ್ಞೆ. ಇದೀಗ ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಧನಂಜಯ್ ಮತ್ತು ಧನ್ಯತಾ ಇವರಿಬ್ಬರಿಗೆ ಅನೇಕ ವರ್ಷಗಳ ಪರಿಚಯ ಇದೆ. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ವಿವಾಹವಾಗುತ್ತಿದ್ದಾರೆ.

error: Content is protected !!
Scroll to Top