ದೇಶದಲ್ಲೇ ನಿರ್ಮಾಣವಾಗಲಿರುವ ಸರಕು ಸಾಗಾಣೆ ವಿಮಾನ – ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ ಲೋಕಾರ್ಪಣೆ

ನ್ಯೂಸ್ ಕಡಬ) newskadaba.com ವಡೋದರ, ಅ.28. ಸೇನಾ ಸರಕು ಸಾಗಣೆಗೆ ನೆರವಾಗುವ ಸ್ಪೇನ್‌ನ ಸಿ-295 (C-295) ಅತ್ಯಾಧುನಿಕ ವಿಮಾನಗಳು ಮೇಕ್‌ ಇನ್‌ ಇಂಡಿಯಾ ಅಡಿ ದೇಶದಲ್ಲೇ ತಯಾರಾಗಲಿದೆ. ಇಂದು ಗುಜರಾತ್‌ನ ವಡೋದರಾದಲ್ಲಿ ಸಿ-295 ಅತ್ಯಾಧುನಿಕ ವಿಮಾನಗಳನ್ನು ತಯಾರಿಸಲಿರುವ ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್‌ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಜಂಟಿಯಾಗಿ ಲೋಕಾರ್ಪಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಮೋದಿ, ಟಾಟಾ-ಏರ್‌ಬಸ್ ಉತ್ಪಾದನಾ ಸೌಲಭ್ಯವು ಭಾರತ-ಸ್ಪೇನ್ ಸಂಬಂಧಗಳನ್ನು ಮತ್ತು ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ವಿಷನ್ ಅನ್ನು ಬಲಪಡಿಸುತ್ತದೆ. ವಡೋದರಾ ಸೌಲಭ್ಯದಲ್ಲಿ ತಯಾರಾದ ವಿಮಾನಗಳನ್ನು ಭವಿಷ್ಯದಲ್ಲಿ ರಫ್ತು ಮಾಡಲಾಗುವುದು ಎಂದು ತಿಳಿಸಿದರು.

Also Read  ಪ್ರಿಯಕನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ ➤ ಕೊಲೆಯ ರಹಸ್ಯ ಬಹಿರಂಗಪಡಿಸಿದ ಮಗಳು

error: Content is protected !!
Scroll to Top