ಗೋಲ್ ಗಪ್ಪಾ ಪ್ರಿಯರಿಗೆ ಕಾದಿದೆ ಶಾಕ್: ಪರೀಕ್ಷೆಗೆ ಒಳಪಡಿಸುತ್ತಿರುವ ಆಹಾರ ಇಲಾಖೆ ನಿರ್ಬಂಧ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.28. ಕರ್ನಾಟಕದಲ್ಲಿ ಆಹಾರ ಗುಣಮಟ್ಟದ ವಿಚಾರದಲ್ಲಿ ಕಠಿಣ ನಿಲುವು ತಳೆದಿರುವ ಆಹಾರ ಇಲಾಖೆ, ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ, ರಾಸಾಯನಿಕ ಬಳಕೆಗೆ ಈಗಾಗಲೇ ನಿರ್ಬಂಧ ವಿಧಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ, ಮಾಲ್​​ಗಳಲ್ಲಿ ಫುಡ್ ಟೆಸ್ಟಿಂಗ್ ಕಿಟ್ ಇರಿಸಿ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದೆ. ಗೋಲ್ ಗಪ್ಪಾ ಪ್ರಿಯರಿಗೂ ಶಾಕ್ ಎದುರಾಗುವ ಸಾಧ್ಯತೆ ಇದೆ. ಗೋಲ್ ಗಪ್ಪಾದ ಗುಣಮಟ್ಟದ ಮೇಲೆ ಅನೇಕ ದೂರುಗಳು ಕೇಳಿ ಬಂದ ಕಾರಣ ಗೋಲ್ ಗಪ್ಪಾ ಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಆಹಾರ ಇಲಾಖೆಯಿಂದ ಫುಡ್ ಟೆಸ್ಟಿಂಗ್ ಕಾರ್ಯಾಚರಣೆ ಮುಂದುವರಿದಿದ್ದು, ಗೋಲ್ ಗಪ್ಪಾವನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

Also Read  ರ‍್ಯಾಪಿಡೊ ಚಾಲಕನಿಂದ ಅಸಭ್ಯವಾಗಿ ವರ್ತನೆ ➤ ಚಲಿಸುತ್ತಿದ್ದ ಬೈಕ್‌ನಿಂದ ಜಿಗಿದ ಯುವತಿ!

 

 

error: Content is protected !!
Scroll to Top