ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು ಮೃತದೇಹ ಛಿದ್ರಛಿದ್ರ..!

(ನ್ಯೂಸ್ ಕಡಬ) newskadaba.com ಅ. 24. ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಡ ಘಟನೆ ಕಬಕ- ಪುತ್ತೂರು ರೈಲ್ವೇ ನಿಲ್ದಾಣ ಸಮೀಪ ನಡೆದಿದೆ.

ಅಪಘಾತದಿಂದಾಗಿ ವ್ಯಕ್ತಿಯ ಕಾಲು ತುಂಡಾಗಿದೆ. ಪೆರ್ಲ ಮೂಲದ ವ್ಯಕ್ತಿ ಎಂಬ ಮಾಹಿತಿ ಲಭಿಸಿದ್ದು ಅಪಘಾತವೋ ಆತ್ಮಹತ್ಯೆಯ ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಘಟನಾ ಸ್ಥಳದಲ್ಲಿ ರೈಲ್ವೇ ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಶವಗಾರಕ್ಕೆ ಸಾಗಿಸಿದ್ದಾರೆ.

Scroll to Top