ಗೋಳಿತ್ತಡಿ – ಏಣಿತ್ತಡ್ಕ ನೂತನ ರಸ್ತೆಯಲ್ಲಿ ಮೊದಲ ಅಪಘಾತ ► ದ್ವಿಚಕ್ರ ವಾಹನ ಸವಾರನಿಗೆ ಗಾಯ



(ನ್ಯೂಸ್ ಕಡಬ) newskadaba.com ಕಡಬ, ಮಾ.17. ಬೈಕ್ ಹಾಗೂ ಆಕ್ಟಿವಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರನೋರ್ವ ಗಾಯಗೊಂಡ ಘಟನೆ ಗೋಳಿತ್ತಡಿಯ ಅಂಬಾ ಕ್ರಾಸ್ ಎಂಬಲ್ಲಿ ಶನಿವಾರದಂದು ನಡೆದಿದೆ.







ಘಟನೆಯಲ್ಲಿ ಕೊಯಿಲ ಗ್ರಾಮದ ಸುಣ್ಣಾಡಿ ಸಮೀಪದ ನಿವಾಸಿ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ಪ್ರಥಮ ಬಿ.ಕಾಂ. ವಿದ್ಯಾರ್ಥಿ ಕೌಶಿಕ್ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಣ್ಣಾಡಿಯಿಂದ ಗೋಳಿತ್ತಡಿಗೆ ಆಗಮಿಸುತ್ತಿದ್ದ ಆಕ್ಟಿವಾ ಹಾಗೂ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಕಳೆದೆರಡು ದಿನಗಳ ಹಿಂದೆ ಈ ರಸ್ತೆಗೆ ಡಾಮರೀಕರಣವಾಗಿದ್ದು, ಮೊದಲ ಅಪಘಾತ ನಡೆದಿದೆ.






error: Content is protected !!
Scroll to Top