ಕೊಂಬಾರು: ನಾಯಿ ಅಡ್ಡ ಬಂದು ಬೈಕ್ ಪಲ್ಟಿ ► ಸಹ ಸವಾರೆಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮಾ.17. ಠಾಣಾ ವ್ಯಾಪ್ತಿಯ ಕೊಂಬಾರು ಎಂಬಲ್ಲಿ ನಾಯಿಯೊಂದು ಅಡ್ಡ ಬಂದ ಪರಿಣಾಮವಾಗಿ ಬೈಕ್ ಪಲ್ಟಿಯಾಗಿ ಸಹ ಸವಾರೆ ಗಾಯಗೊಂಡ ಘಟನೆ ಶನಿವಾರದಂದು ನಡೆದಿದೆ.

ಗಾಯಾಳು ಮಹಿಳೆಯನ್ನು ಕೊಂಬಾರಿನ ತಿಮ್ಮಕ್ಕ(65) ಎಂದು ಗುರುತಿಸಲಾಗಿದೆ. ಗಾಯಾಳು ಮಹಿಳೆಯನ್ನು 108 ಆಂಬ್ಯುಲೆನ್ಸ್ ಮೂಲಕ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗಿದೆ.

error: Content is protected !!

Join the Group

Join WhatsApp Group