ಅಸಮರ್ಪಕ ರಸ್ತೆ ವ್ಯವಸ್ಥೆ; ವೃದ್ದರನ್ನು ಕುರ್ಚಿಯಲ್ಲಿ ಕೂರಿಸಿ ಆಸ್ಪತ್ರೆಗೆ ಹೊತ್ತೊಯ್ದ ಯುವಕರು

(ನ್ಯೂಸ್ ಕಡಬ) newskadaba.com ಅ.17. ಸಮರ್ಪಕ ರಸ್ತೆ ಸಂಪರ್ಕವಿಲ್ಲದೇ ಅನಾರೋಗ್ಯ ಪೀಡಿತ ವೃದ್ಧರೊಬ್ಬರನ್ನು ಯುವಕರು ಕುರ್ಚಿಯಲ್ಲಿ ಕೂರಿಸಿ ಆಸ್ಪತ್ರೆಗೆ ಹೊತ್ತೊಯ್ದಿರುವ ಘಟನೆ ತಾಲೂಕಿನ ಗುತ್ತಿಗಾರು ಮಡಪ್ಪಾಡಿ ಗ್ರಾಮದ ನಡುಬೆಟ್ಟು ಎಂಬಲ್ಲಿ ನಡೆದಿದೆ.

 

ಸುಳ್ಯ ತಾಲೂಕಿನ ನಡುಬೆಟ್ಟು ಭಾಗದಲ್ಲಿ ಸುಮಾರು 14 ಮನೆಗಳಿದ್ದು, ಈ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ಯಾವುದೇ ವಾಹನಗಳ ಚಾಲಕರು ಈ ಭಾಗದ ಮನೆಗಳಿಗೆ ಬರಲು ನಿರಾಕರಿಸುತ್ತಾರೆ ಎನ್ನಲಾಗಿದೆ. ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು, ಈ ಕಾರಣದಿಂದ ಬೇಸಿಗೆಯಲ್ಲಿ ಮಾತ್ರ ಜೀಪು, ಪಿಕಪ್ ಗಳು ಸಂಚರಿಸುತ್ತವೆ. ಮಳೆಗಾಲದಲ್ಲಿ ಯಾವ ವಾಹನಗಳೂ ಸಂಚರಿಸುವುದಿಲ್ಲ. ಹೀಗಾಗಿ ಇಲ್ಲಿ ವಾಸಿಸುವ ಜನರು ಎಲ್ಲ ರೀತಿಯ ಕೃಷಿ ಉತ್ಪನ್ನ ಮತ್ತು ದಿನ ನಿತ್ಯಕ್ಕೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ಹೊತ್ತುಕೊಂಡೇ ಸಾಗುತ್ತಾರೆ.

Scroll to Top