ಇಂದು ಪ್ರಧಾನಿ ಮೋದಿಯಿಂದ ಟೆಲಿಕಾಂ ಸ್ಟ್ಯಾಂಡರ್ಡ್‌ ಸಮ್ಮೇಳನ ಉದ್ಘಾಟನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 15. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಇಂಟರ್ ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ – ವರ್ಲ್ಡ್ ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡೈಸೇಶನ್ ಅಸೆಂಬ್ಲಿಯನ್ನು ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಭಾರತ್‌ ಮಂಟಪಕ್ಕೆ ಭೇಟಿ ನೀಡಿ ವಸ್ತು ಪ್ರದರ್ಶನವನ್ನು ಪರಿಶೀಲಿಸಿದರು ಈ ವೇಳೆ ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಇದ್ದರು.


ಇಂಟರ್ ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್-ವರ್ಲ್ಡ್ ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡೈಸೇಶನ್ ಅಸೆಂಬ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಆಡಳಿತ ಸಮ್ಮೇಳನವಾಗಿದೆ. WTSA 2024 ಮುಂದಿನ ಪೀಳಿಗೆಯ ನಿರ್ಣಾಯಕ ತಂತ್ರಜ್ಞಾನಗಳಾದ 6G, AI, IoT, ಬಿಗ್ ಡೇಟಾ ಮತ್ತು ಸೈಬರ್‌ ಸುರಕ್ಷತೆಯಂತಹ ಭವಿಷ್ಯದ ಮಾನದಂಡಗಳನ್ನು ನಿರ್ಧರಿಸಲು ದೇಶಗಳಿಗೆ ವೇದಿಕೆಯನ್ನು ನೀಡುತ್ತದೆ. ಇನ್ನು ಈ ಸಮ್ಮೇಳನದಲ್ಲಿ 190ಕ್ಕೂ ಹೆಚ್ಚು ದೇಶಗಳ ಸುಮಾರು 3,000 ಉದ್ಯಮ ನಾಯಕರು ಮತ್ತು ಟೆಕ್ ತಜ್ಞರನ್ನು ಒಟ್ಟುಗೂಡಿಸಲು ಯೋಜಿಸಲಾಗಿದೆ. ಟೆಲಿಕಾಂ, ಡಿಜಿಟಲ್ ಮತ್ತು ICT ವಲಯಗಳ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

error: Content is protected !!

Join the Group

Join WhatsApp Group