(ನ್ಯೂಸ್ ಕಡಬ) newskadaba.com ಅ. 15. ಮದರಸ ಹಾಸ್ಟೆಲ್ ನಲ್ಲಿ ರಾತ್ರಿ ವೇಳೆ ಬಾತ್ ರೂಂನಲ್ಲಿ ಮದರಸಾ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ರಂಗನಕೆರೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಸಿದ್ದಾಪುರ ಮೂಲದ ರಿಹಾನ್ ಬೇಗಮ್ ಎಂಬವರ ಪುತ್ರ ಮಹಮ್ಮದ್ ಜಹೀದ್ (12) ಎಂದು ಗುರುತಿಸಲಾಗಿದೆ. ಮೃತ ಮುಹಮ್ಮದ್ ಜಹೀದ್ ಕಳೆದ ನಾಲ್ಕು ತಿಂಗಳಿಂದ ಮದರಸ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ. ರಜೆಯಲ್ಲಿ ಮನೆಗೆ ತೆರಳಿದ್ದ ಜಹೀದ್ ರಜೆ ಮುಗಿಸಿ ಹಾಸ್ಟೆಲ್ ಮರಳಿದ್ದು, ರಾತ್ರಿ ವೇಳೆ ಮದರಸ ಹಾಸ್ಟೆಲ್ ಬಾತ್ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಸದ್ಯ ಮಗನ ಸಾವಿನ ಕುರಿತು ತಾಯಿ ರಿಹಾನ ಬೇಗಂ ಸಂಶಯ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.