ವಿಡಿಯೋ ಲೈಕ್ ಮಾಡಿ 5 ಲಕ್ಷ ರೂ. ಕಳೆದುಕೊಂಡ ಭೂಪ..!

(ನ್ಯೂಸ್ ಕಡಬ) newskadaba.com ಅ. 09.

ನಕಲಿ ಆನ್ ಲೈನ್ ಅರ್ನಿಂಗ್ ಆ್ಯಪ್ ಜಾಲಕ್ಕೆ ಸಿಲುಕಿ ವ್ಯಕ್ತಿಯೊಬ್ಬರು 5 ಲಕ್ಷ ರೂ. ಕಳೆದುಕೊಂಡ ಘಟನೆ ವರದಿಯಾಗಿದೆ. ದೂರುದಾರರು ಸೆ.28ರಂದು ಇನ್ಸ್ಟಾಗ್ರಾಂ ಮೂಲಕ ಬಂದ ಆನ್ ಲೈನ್ ಅರ್ನಿಂಗ್ ಎಂಬ ಲಿಂಕ್ ನ್ನು ಕ್ಲಿಕ್ ಮಾಡಿದ್ದು, ಈ ವೇಳೆ 9733674701 ನಂಬರಿನ ವಾಟ್ಸಾಪ್ ಚಾಟ್ ತೆರೆದುಕೊಂಡಿದೆ. ಅದರಲ್ಲಿ ಅಪರಿಚಿತ ವ್ಯಕ್ತಿಯು ತಾವು ಕಳಿಸಿದ ವಿಡಿಯೋಗೆ ಲೈಕ್ ಮಾಡಿದರೆ 123ರಿಂದ 5000 ರೂ.ವರೆಗೆ ಗಳಿಸಬಹುದು ಎಂದು ತಿಳಿಸಿದ್ದು, ನಂಬಿದ ದೂರುದಾರ ವ್ಯಕ್ತಿ ವಿಡಿಯೋಗೆ ಲೈಕ್ ಕೊಟ್ಟಿದ್ದರು. ಬಳಿಕ ಟೆಲಿಗ್ರಾಂ ಅಪ್ಲಿಕೇಷನ್ ಲಿಂಕ್ ಕಳಿಸಿ, ಲೈಕ್ ಮಾಡಿದ್ದಕ್ಕೆ 123 ರೂ. ಗಳನ್ನು ದೂರುದಾರರ ಖಾತೆಗೆ ಜಮೆಯಾಗಿತ್ತು.

ಬಳಿಕ ಆರೋಪಿಗಳು ದೂರುದಾರರೊಂದಿಗೆ ಮತ್ತೆ ಚಾಟ್ ಮಾಡಿ ಇದೇ ರೀತಿ ಹೆ್ಚ್ಚು ಹಣ ಗಳಿಸಬಹುದು ಎಂದು ನಂಬಿಸಿ ದೂರುದಾರರನ್ನು ಡಿ929 ಗ್ಲೋಬಲ್ ಹೈ ಸಾಲರಿ ಗ್ರೂಪ್ ಎಂಬ ಟೆಲಿಗ್ರಾಂ ಗ್ರೂಪಿಗೆ ಸೇರಿಸಿ ಲಿಂಕ್ ವೊಂದನ್ನು ಕಳುಹಿಸಿದ್ದರು. ಆರೋಪಿಗಳು ಅನಿಲ್ ಸಿಂಗ್, ತ್ರಿಶಾ ವರ್ಮ ಎಂಬ ಯೂಸರ್ ನೇಮ್ ನಿಂದ ಚಾಟ್ ಮಾಡಿ, 5000 ರೂ. ಜಮೆ ಮಾಡುವಂತೆ ತಿಳಿಸಿದ್ದರು. ಅದರಂತೆ ದೂರುದಾರರು 5000 ರೂ. ಜಮೆ ಮಾಡಿ, ಅವರು ಹೇಳಿದ ಟಾಸ್ಕ್ ಪೂರ್ಣಗೊಳಿಸಿ ಹಣ ತೆಗೆಯಲು ಹೋಗಿದ್ದು, ಆಗ ವಂಚಕರು ನೀವು ತಪ್ಪು ಮಾಡಿದ್ದೀರಾ, 5000 ರೂ. ಬೇಕಾದರೆ 50 ಸಾವಿರ ಹಣ ಇರಿಸುವಂತೆ ಕೇಳಿದ್ದಾರೆ. ಇದೇ ರೀತಿ ತಪ್ಪಿರುವುದಾಗಿ ಹೇಳಿ ನಂಬಿಸಿ ಹಣ ಪಡೆಯುತ್ತಾ ಹೋಗಿದ್ದಾರೆ. ದೂರುದಾರರು ಒಟ್ಟು 5,09,000 ರೂ. ಮೊತ್ತವನ್ನು ವಿವಿಧ ಖಾತೆಗಳಿಂದ ವರ್ಗಾವಣೆ ಮಾಡಿದ್ದರು ಎನ್ನಲಾಗಿದೆ. ಆರೋಪಿಗಳು ಬಳಿಕ ಮೊತ್ತವನ್ನು ಮರಳಿಸದೆ ವಂಚಿಸಿರುವುದಾಗಿ ದೂರಲಾಗಿದೆ.

error: Content is protected !!

Join WhatsApp Group

WhatsApp Share