ನಿಮ್ಮ ಕನಸನ್ನು ರೆಕಾರ್ಡ್ ಮಾಡಬಹುದು ಇನ್ನೊಮ್ಮೆ ವೀಕ್ಷೀಸಲೂಬಹುದು..

(ನ್ಯೂಸ್ ಕಡಬ)newskadaba.com,ನವದೆಹಲಿ (.02)  ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ, ಯಾರೂ ಕಲ್ಪನೆ ಮಾಡಿಕೊಳ್ಳದಂಥ ಸಾಧನೆಗಳನ್ನು ಸಂಶೋಧಕರು ಮಾಡುತ್ತಿದ್ದಾರೆ. ಇದಾಗಲೇ ಕೃತಕ ಬುದ್ಧಿಮತ್ತೆ ಎನ್ನುವುದು ನಂಬಲರ್ಹ ಕೆಲಸಗಳನ್ನು ಮಾಡುತ್ತಿದೆ. ಇದೇ ರೀತಿ ಮನುಷ್ಯರು ಮಾಡುವ ಕೆಲಸಗಳನ್ನೆಲ್ಲಾ ಯಂತ್ರಗಳೇ ಮಾಡಿ ಮನುಷ್ಯರಿಗೆ ಉದ್ಯೋಗವೇ ಇಲ್ಲದಂತೆ ಮಾಡುತ್ತದೆ ಎನ್ನುವ ಭಯವೂ ಹಲವರನ್ನು ಕಾಡುವುದು ಇದೆ. ಅಷ್ಟು ಮುಂದುವರೆದಿದೆ ತಂತ್ರಜ್ಞಾನ. ಆದರೆ ಇದೀಗ ಕುತೂಹಲವೆಂಬಂತೆ ಕನಸನ್ನು ಕೂಡ ರೆಕಾರ್ಡ್​ ಮಾಡಿಕೊಳ್ಳಬಲ್ಲ ಹಾಗೂ ಆ ಕನಸನ್ನು ಮತ್ತೊಮ್ಮೆ ಪ್ಲೇ ಮಾಡಿ ನೋಡಬಲ್ಲ ಯಂತ್ರವೊಂದನ್ನು ಕಂಡುಹಿಡಿಯಲಾಗಿದೆ…!

Also Read  ಪೆಟ್ರೋಲ್ ಬೆಲೆ ಏರಿಕೆಗೆ ಏಕೈಕ ಪರಿಹಾರ - 120 ಕಿಮೀ ಮೈಲೇಜ್ ನೀಡುವ ಇಲೆಕ್ಟ್ರಿಕ್ ಸ್ಕೂಟರ್ ➤ ವಿಸ್ತೃತಗೊಂಡು ಶುಭಾರಂಭಗೊಂಡ ಕಡಬದ ಪ್ಯೂರ್ ಇವಿ ಯಲ್ಲಿ ವಿಶೇಷ ಆಫರ್

ಎಂಆರ್​ಐ ಮಷಿನ್​ ಇದಾಗಿದ್ದು, ಎಷ್ಟೋ ಬಾರಿ ಕನಸುಗಳು ನಮ್ಮ ನೆನಪಿನಲ್ಲಿ ಉಳಿಯುವುದೇ ಇಲ್ಲ. ಆದರೆ ಆ ಕನಸು ಹಲವು ಬಾರಿ ಅಲ್ಪಸ್ವಲ್ಪವೂ ನೆನಪು ಇರದಿದ್ದರೆ, ಕೆಲವು ಸಲ ಒಂದಿಷ್ಟು ಪಾರ್ಟ್​ ಮಾತ್ರ ನೆನಪು ಇರುತ್ತದೆ. ಅಯ್ಯೋ ಎಷ್ಟು ಚೆನ್ನಾಗಿತ್ತು ಕನಸು, ಅಬ್ಬಾ ಎಷ್ಟು ಭೀಕರವಾಗಿತ್ತು ಕನಸು, ನಿಮಗೂ ಹೇಳಬೇಕಿತ್ತು ಎಂದೆಲ್ಲಾ ಎಷ್ಟು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದೇ ಇಲ್ಲ. ಇದೀಗ ಆ ಕನಸನ್ನು ಇನ್ಮುಂದೆ ರೆಕಾರ್ಡ್​ ಮಾಡಿಕೊಳ್ಳಬಹುದಾದ ತಂತ್ರಜ್ಞಾನ ಕಂಡುಹಿಡಿಯಲಾಗಿದೆ.

error: Content is protected !!
Scroll to Top