(ನ್ಯೂಸ್ ಕಡಬ) newskadaba.com ನವದೆಹಲಿ, ಅ. 02. ಆ್ಯಪಲ್ ಕಂಪನಿ ಐಫೋನ್ 16 ಸರಣಿಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮೇಡ್-ಇನ್-ಇಂಡಿಯಾ ಐಫೋನ್ 16 ಸರಣಿಯು ಪ್ರಪಂಚದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಕ್ಯಾಲಿಫೋರ್ನಿಯಾದ ಆ್ಯಪಲ್ ಪಾರ್ಕ್‌ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ʼಇಟ್ಸ್ ಗ್ಲೋಟೈಮ್ʼ ಎಂಬ ವಾರ್ಷಿಕ ಕಾರ್ಯಕ್ರಮದಲ್ಲಿ ಕಂಪನಿಯು ತನ್ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಉತ್ತಮ ಕಾರ್ಯಕ್ಷಮತೆಗಾಗಿ ಎಲ್ಲಾ ಮಾದರಿಗಳು ಹೊಸ A18 ಪ್ರೊ ಚಿಪ್‌ಸೆಟ್ ನ್ನು ಒಳಗೊಂಡಿರುತ್ತವೆ.