ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್- ಕೋಲಾರದ ಕೀರ್ತನಾ ಪಾಂಡಿಯನ್ ಗೆ ಕಂಚಿನ ಪದಕ

(ನ್ಯೂಸ್ ಕಡಬ) newskadaba.com ಕೋಲಾರ, ಸೆ. 20. ಮಂಗೋಲಿಯಾದ ಉಲಾನ್‌ ಬಾಟರ್‌ನಲ್ಲಿ ನಡೆದ ವಿಶ್ವ ಸ್ನೂಕರ್ ಚಾಂಪಿಯನ್‌ ಶಿಪ್‌ನಲ್ಲಿ ಚಿನ್ನದ ನಾಡಿನ ಹುಡುಗಿ ಕೀರ್ತನಾ ಪಾಂಡಿಯನ್ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಮೂಲತಃ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ದಾಸರಹೊಸಹಳ್ಳಿ ನಿವಾಸಿಯಾದ ಕೀರ್ತನಾ ಬೆಮಲ್ ನೌಕರ ಪಾಂಡಿಯನ್ ದಂಪತಿ ಪುತ್ರಿ. ಈ ಮೂಲಕ ಚಿನ್ನದ ನಾಡಿನ ಯುವತಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

Scroll to Top