ಪುತ್ತೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು…!

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 12. ಆ್ಯಕ್ಟೀವಾ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಕುರಿತು ತಿಳಿದು ಬಂದಿದೆ.

ಮೃತ ಯುವಕನನ್ನು ಕೆಯ್ಯೂರು ಗ್ರಾಮದ ಎರಕ್ಕಳ ಬೆಳಿಯಪ್ಪ ಗೌಡರ ಪುತ್ರ ಕೀರ್ತನ್ ಗೌಡ ಎಂದು ಗುರುತಿಸಲಾಗಿದೆ. ಕೀರ್ತನ್ ಸೆ. 10ರಂದು ರಾತ್ರಿ ವೇಳೆ ತನ್ನ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಕೆದಂಬಾಡಿ ಗ್ರಾಮದ ತ್ಯಾಗರಾಜ ನಗರದಲ್ಲಿ ಅಪಘಾತ ಸಂಭವಿಸಿ, ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Scroll to Top