ಕುರಿದೊಡ್ಡಿಗೆ ನುಗ್ಗಿ 10 ಕುರಿಗಳನ್ನು ಬಲಿಪಡೆದ ಚಿರತೆ..!

(ನ್ಯೂಸ್ ಕಡಬ) newskadaba.com ಕೋಲಾರ, ಸೆ. 11. ರಾತ್ರಿ ವೇಳೆ ಕುರಿದೊಡ್ಡಿಗೆ ನುಗ್ಗಿದ ಚಿರತೆಯೊಂದು ಸುಮಾರು ಹತ್ತು ಕುರಿಗಳನ್ನು ತಿಂದು ಮುಗಿಸಿರುವ ಘಟನೆ ಕೋಲಾರ ತಾಲ್ಲೂಕು ಅಬ್ಬಣಿ ಗ್ರಾಮದಲ್ಲಿ ಜರುಗಿದೆ.

ಕೋಲಾರ ತಾಲ್ಲೂಕಿನ ಅಬ್ಬಣಿ ಗ್ರಾಮದ ನಾರಾಯಣಪ್ಪ ಎಂಬವರಿಗೆ ಸೇರಿದ ಕುರಿಗಳಾಗಿದ್ದು, ಕಳೆದೊಂದು ವಾರದಲ್ಲಿ ಇದು ನಾಲ್ಕನೇ ಬಾರಿ ಚಿರತೆಯಿಂದ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಕುರಿಗಳನ್ನು ಚಿರತೆ ತಿಂದಿದ್ದು, ಗ್ರಾಮಸ್ಥರಲ್ಲಿಆತಂಕ ಸೃಷ್ಟಿಸಿದೆ. ಚಿರತೆ ಹಿಡಿದು ಅರಣ್ಯಕ್ಕೆ ಬಿಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Scroll to Top