ವಿಟ್ಲ: ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 03. ಜಿಲ್ಲೆಯ  ವಿಟ್ಲ ಶಿಶು ಅಭಿವೃದ್ಧಿ ಯೋಜನೆಯ ಖಾಲಿಯಿರುವ ಈ ಕೆಳಕಂಡ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗಳಿಗೆ ಆನ್‍ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆ/ ಸಹಾಯಕಿಯರ ಗೌರವಸೇವೆಯ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ವೆಬ್‍ ಸೈಟ್ ವಿಳಾಸ https:karnemakaone.kar.nic.in/abcd/  ನಲ್ಲಿ ಆನ್‍ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26 ಕೊನೆಯ  ದಿನ. ಖಾಲಿಹುದ್ದೆಗಳ, ಅಂಗನವಾಡಿಗಳ ಸ್ಥಳ ಹಾಗೂ ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ವಿಟ್ಲ, ರಿಹಾ ಪ್ಲಾನೆಟ್, ಚಂದ್ರನಾಥ ಬಸದಿ ಎದುರು, ಪುತ್ತೂರು ರಸ್ತೆ, ವಿಟ್ಲ ಅಂಚೆ ದೂರವಾಣಿ ಸಂಖ್ಯೆ: 08255-238080 ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top