ಕಡವೆ ಬೇಟೆ- ನಾಲ್ವರ ಬಂಧನ

crime, arrest, suspected

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಸೆ. 02. ಕಡವೆಯನ್ನು ಬೇಟೆಯಾಡಿದ ಅರೋಪದಡಿ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.

ಬಂಧಿತರನ್ನು ಭದ್ರಾವತಿ ತಾಲೂಕಿನ ಗೋಂದಿ ಗ್ರಾಮದ ನಿವಾಸಿ ಶಿವ ಬಿನ್ ರಾಜಪ್ಪ, ವೆಂಕಟೇಶ ಬಿನ್ ಮುನಿಯಪ್ಪ, ಚಿಕ್ಕಮಗಳೂರು ಚೌಡಿಕಟ್ಟೆ ಭೈರಾಪುರ ಗ್ರಾಮ ವಾಸಿಗಳಾದ ಮಂಜಪ್ಪ ಬಿನ್ ನಾಗಪ್ಪ ಹಾಗೂ ವಿನೋದ ಬಿನ್ ಮಂಜಪ್ಪ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಭದ್ರಾವತಿ ತಾಲೂಕು ಉಂಬ್ಳೆಬೈಲು ರೇಂಜ್‌ ನ ಚೌಡಿಕಟ್ಟೆಯ ಬಳಿ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿ ಬಳಿಕ ಅದರ ತಲೆಯನ್ನು ಕೆರೆಗೆ ಎಸೆದು ಹೋಗಿದ್ದರು ಎನ್ನಲಾಗಿದೆ. ಈ ಪ್ರಕರಣವನ್ನ ಭೇದಿಸಿದ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

Scroll to Top