ನಿಯಂತ್ರಣ ತಪ್ಪಿದ ಖಾಸಗಿ ಬಸ್ ಮೂರು ವಾಹನಗಳಿಗೆ ಢಿಕ್ಕಿ- ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 30. ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ರಿಕ್ಷಾ, ಕಾರು ಹಾಗೂ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ನಗರದ ಹಂಪನಕಟ್ಟೆ ಬಳಿ ನಡೆದಿದೆ.

ಗಾಯಗೊಂಡವರನ್ನು ಜಪ್ಪು ಬಪ್ಪಾಲ್‌ ನಿವಾಸಿಗಳಾದ ಉಸ್ಮಾನ್ ಮತ್ತವರ ಪತ್ನಿ ರಮ್ಲಾ ಹಾಗೂ ಪುತ್ರ ಮುಹಮ್ಮದ್ ನಝಲ್ ಎಂದು ಗುರುತಿಸಲಾಗಿದೆ. ನಗರದ ಬಲ್ಮಠ ರಸ್ತೆಯಾಗಿ ಸ್ಟೇಟ್‌ ಬ್ಯಾಂಕ್ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಚಾಲಕನಿಗೆ ತಲೆಸುತ್ತು ಬಂದಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿ ನಿಲ್ಲಿಸಲಾಗಿದ್ದ ರಿಕ್ಷಾ, ಕಾರು, ಬೈಕ್‌ಗೆ ಢಿಕ್ಕಿಯಾಗಿ, ಈ ಘಟನೆ ಸಂಭವಿಸಿದೆನ್ನಲಾಗಿದೆ. ಘಟನೆಯಲ್ಲಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ರಿಕ್ಷಾದಲ್ಲಿದ್ದ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

Scroll to Top