ಇಬ್ಬರು ಬಾಲಕಿಯರನ್ನು ಕೊಲೆಗೈದ ಮಲತಂದೆ ಆರೆಸ್ಟ್

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 27.   ಇಬ್ಬರು ಬಾಲಕಿಯರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಮಲತಂದೆಯನ್ನು ಅಮೃತಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ ಎನ್ನಲಾಗಿದೆ.

ಆರೋಪಿಯನ್ನು ಕಾವೇರಿ ಲೇಔಟ್ ನಿವಾಸಿ ಕ್ಯಾಬ್ ಡ್ರೈವರ್ ಸುಮಿತ್ ಮೋಹನ್ (45) ಎಂದು ಗುರುತಿಸಲಾಗಿದೆ. ಹತ್ಯೆಯಾದ ಬಾಲಕಿಯನ್ನು ಸೃಷ್ಟಿ (14) ಹಾಗೂ ಸೋನಿಯಾ (16) ಎಂದು ಗುರುತಿಸಲಾಗಿದೆ. ಬಾಲಕಿಯರು ಕ್ರಮವಾಗಿ 8 ಮತ್ತು 9ನೇ ತರಗತಿ ಓದುತ್ತಿದ್ದರು. ಹಿರಿಯ ಮಗಳು ಫೋನ್ ನಲ್ಲಿ ಮಾತನಾಡುತ್ತಿದ್ದು, ಊಟ ಬಡಿಸುವಂತೆ ಪದೇ ಪದೇ ಕೇಳಿದರೂ ಕಿವಿಗೊಡದ ಕಾರಣ ಕೋಪದಲ್ಲಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಬಳಿಕ ಕಿರಿಯ ಪುತ್ರಿಯನ್ನೂ ಹತ್ಯೆ ಮಾಡಿದ್ದಾನೆಂದು ವಿಚಾರಣೆ ವೇಳೆ ವರದಿ ತಿಳಿದುಬಂದಿದೆ.

Also Read  ಕಡಬ: ಹವ್ಯಾಸಿ ಗಾಯಕ ಹೃದಯಾಘಾತದಿಂದ ನಿಧನ


 

 

error: Content is protected !!
Scroll to Top