‘ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್’ ಗೆ ಕು. ಕ್ಲಾರಿಸ್ಸಾ ಏಂಜಲ್ ಮೊಂತೆರೋ ಆಯ್ಕೆ

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 23.   ಡಿ.ಸಿ.ಸಿ ಕ್ಲಬ್ ನ ಕು. ಕ್ಲಾರಿಸ್ಸಾ ಏಂಜಲ್ ಮೊಂತೆರೋ ಅವರು ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಹಾಗೂ ಸೀನಿಯರ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿ ಹಿಮಾಚಲ ಪ್ರದೇಶದಲ್ಲಿ ಅಕ್ಟೋಬರ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ.

ಕ್ಲಾರಿಸ್ಸಾ ಏಂಜಲ್ ಮೊಂತೆರೋ ಅವರು, ಡಿ.ಸಿ.ಸಿ ಕ್ಲಬ್ ನ ಮುಖ್ಯ ತರಬೇತುದಾರರಾದ ಸರಸ್ವತಿ ಪುತ್ರನ್ ಹಾಗೂ ಹರೀಶ್ ಗೌಡ, ಪ್ರೇಮನಾಥ ಉಳ್ಳಾರಿಂದ ತರಬೇತುಗೊಂಡಿದ್ದಾರೆ ಎನ್ನಲಾಗಿದೆ.

 

 

Scroll to Top