’ಮುಡಾಗೆ ಸಿಎಂ ಪತ್ನಿ ಬರೆದಿದ್ದ ಪತ್ರ ತಿರುಚಲಾಗಿದೆ’   ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪ 

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 22.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಬಳಸಿಕೊಂಡು ಮುಡಾಕ್ಕೆ ಪತ್ನಿ ಪಾರ್ವತಿ ಬರೆದಿರುವ ಪತ್ರವನ್ನು ತಿರುಚಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಪತ್ನಿ ಇಂತಹುದೇ ಬಡಾವಣೆಯಲ್ಲಿ ಸೈಟು ಕೊಡಿ ಎಂದು ಕೇಳಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರ ಮಾತಿನಲ್ಲಿ ಎಷ್ಟು ಸತ್ಯ ಅಡಗಿದೆ ಎಂಬ ಅನುಮಾನ ಈಗ ಮತ್ತಷ್ಟು ದಟ್ಟವಾಗಿದೆ.

Scroll to Top