ಎಸ್ಸಿ, ಎಸ್ಟಿ ಒಲಮೀಸಲಾತಿ- ಇಂದು ಭಾರತ್ ಬಂದ್ ಗೆ ಕರೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 21. ಎಸ್‌ಸಿ, ಎಸ್‌ಟಿ ಒಳಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿವೆ ಎಂಬ ಸುಪ್ರೀಂ ಕೋರ್ಟ್‌ನ ಇತ್ತೀಚೆಗಿನ ತೀರ್ಪನ್ನು ಖಂಡಿಸಿ ಇಂದು (ಆ. 21) ರಿಸರ್ವೇಷನ್‌ ಬಚಾವೋ ಸಂಘರ್ಷ್‌ ಸಮಿತಿಯು ಭಾರತ್‌ ಬಂದ್‌ ಗೆ ಕರೆನೀಡಿದೆ. ಈ ಹಿನ್ನೆಲೆ ರಾಜಸ್ಥಾನ, ಉತ್ತರಪ್ರದೇಶ ಸೇರಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬಂದ್‌ಗೆ ಹೆಚ್ಚು ಬೆಂಬಲ ವ್ಯಕ್ತವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಉದ್ಯಮಸಂಸ್ಥೆಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ನೀಡಬೇಕು ಎಂದು ಆದಿವಾಸಿ, ದಲಿತ ಸಂಘಟನೆಗಳು ಕರೆ ನೀಡಿವೆ.

Scroll to Top