ಹಾಸನದಲ್ಲೊಬ್ಬ ವಿಕೃತ ಮನುಷ್ಯ – ಲೇಡಿಸ್ ಚಪ್ಪಲಿಗಳನ್ನೇ ಟಾರ್ಗೆಟ್ ಮಾಡುವ ಭೂಪ…!

(ನ್ಯೂಸ್ ಕಡಬ) newskadaba.com ಹಾಸನ, ಆ. 20. ರಾಜ್ಯದಲ್ಲಿ ಎಂತೆಂತಾ ವಿಕೃತಕಾಮಿಗಳು ಇರುತ್ತಾರೆ ಅಂದರೆ ಮಹಿಳೆಯರ ಒಳ ಒಡುಪು ಕದಿಯೋ ವಿಕೃತಿ ಕಾಮಿಯನ್ನು ನೀವು ನೋಡಿರ್ತೀರಾ. ಆದರೆ ಈ ವಿಕೃತಕಾಮಿಯೋರ್ವ ಪ್ರತ್ಯಕ್ಷನಾಗಿದ್ದು, ಲೇಡೀಸ್ ಚಪ್ಪಲಿಗಳೇ ಈತನ ಟಾರ್ಗೆಟ್ ಮಾಡುತ್ತಿರುವ ಘಟನೆ ಹಾಸನದ ಚನ್ನಪಟ್ಟಣ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.

ಮಧ್ಯರಾತ್ರಿಯಲ್ಲಿ ಮನೆ, ಅಪಾರ್ಟ್ ಮೆಂಟ್ ಗೆ ನುಗ್ಗುವ ಈ ಕಾಮುಕ ಹೊರಗಡೆ ಬಿಟ್ಟ ಮಹಿಳೆಯರ ಚಪ್ಪಲಿಗಳನ್ನು ಎತ್ತಿಕೊಂಡು ಹೋಗಿ ಮುತ್ತು ಕೊಡುತ್ತಾನೆ ಎನ್ನಲಾಗಿದೆ. ಮನೆಯೊಂದರ ಸಿಸಿಟಿವಿಯಲ್ಲಿ ವಿಕೃತ ಕಾಮಿಯ ಕಳ್ಳಾಟ ಸೆರೆಯಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ವಿಕೃತಕಾಮಿಯನ್ನು ಸೆರೆ ಹಿಡಿಯುವಂತೆ ಜನರು ಆಗ್ರಹಿಸಿದ್ದಾರೆ.

error: Content is protected !!

Join the Group

Join WhatsApp Group