ಶಿಕ್ಷಕಿಯ ಕೊಲೆ ಪ್ರಕರಣ- ಆರು ಬಾಲಕರು ಅರೆಸ್ಟ್…!

(ನ್ಯೂಸ್ ಕಡಬ) newskadaba.com ಕೋಲಾರ, ಆ. 19. ಶಿಕ್ಷಕಿಯನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿ ಮುಳಬಾಗಿಲು ಮೂಲದ ಆರು ಮಂದಿ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಆಗಸ್ಟ್ 14 ರಂದು ಸಂಜೆ ಶಿಕ್ಷಕಿ ದಿವ್ಯಶ್ರೀ ಎಂಬವರನ್ನು ಮುಳಬಾಗಿಲು ನಗರದ ಸುಂಕೂ ಲೇಔಟ್ ನಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣದ ಜಾಡು ಹಿಡಿದ ನಗರ ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿ ಆರೋಪಿಗಳಿಗೆ ಬಲೆ ಬೀಸಿದ್ದರು. ಅದರಂತೆ ಇಂದು ತಿರುಪತಿಯಲ್ಲಿ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಆರು ಜನ ಆರೋಪಿಗಳ ಪೈಕಿ ಬಹುತೇಕ ಅಪ್ರಾಪ್ತರು ಎನ್ನಲಾಗಿದೆ. ವಿಚಾರಣೆಯ ವೇಳೆ ಜಮೀನು ವ್ಯಾಜ್ಯ, ದ್ವೇಷದಿಂದ ಶಿಕ್ಷಕಿ ದಿವ್ಯಶ್ರಿ ಕೊಲೆಗೆ ಸುಫಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಸುಫಾರಿ ನೀಡಿದ ಪ್ರಮುಖ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Scroll to Top