ಆಟೋ ಚಾಲಕನಿಗೆ ಚೂರಿಯಿರಿತ- ಓರ್ವ ಅರೆಸ್ಟ್..!!

(ನ್ಯೂಸ್ ಕಡಬ) newskadaba.com ವಿಟ್ಲ, ಆ. 19. ಇಲ್ಲಿನ ಉರಿಮಜಲು ಎಂಬಲ್ಲಿ ಭಾನುವಾರದಂದು ಬೆಳಗ್ಗೆ ನಡೆದಿದ್ದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಕಾರ್ಯಾಡಿ ನಿವಾಸಿ ಹಾಫಿಲ್ ಯಾನೆ ಆಪೀ ಎಂದು ಗುರುತಿಸಲಾಗಿದೆ. ಉರಿಮಜಲು ನಿವಾಸಿ ಆಟೋ ಚಾಲಕ ಶರೀಫ್ (38) ಎಂಬವರು ಚೂರಿ ಇರಿತದಿಂದ ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶರೀಫ್ ರವರು ಉರಿಮಜಲು ಎಂಬಲ್ಲಿ ಬೇರೆಯವರ ಜತೆ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಆರೋಪಿ ಹಾಫೀಲ್ ಮಾತಿಗೆ ಇಳಿದಿದ್ದು ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಆರೋಪಿ ಶರೀಫ್ ಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top