‘ನಿರ್ಮಲಾ ತುಂಗಭದ್ರಾ ಅಭಿಯಾನ’        ನವೆಂಬರ್ 4 ರಿಂದ ಆರಂಭ             

(ನ್ಯೂಸ್ ಕಡಬ) newskadaba.c0m ಶೃಂಗೇರಿ, ಆ. 16.  ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಹಾಗೂ ಪರ್ಯಾಯ ಟ್ರಸ್ಟ್ ಸಹಯೋಗದಲ್ಲಿ ಶೃಂಗೇರಿಯಿಂದ ಗಂಗಾವತಿ ಬಳಿಯ ಕಿಷ್ಕಿಂದವರೆಗೆ ‘ನಿರ್ಮಲಾ ತುಂಗಭದ್ರಾ ಅಭಿಯಾನ’ 400 ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ತುಂಗಭದ್ರಾ ನದಿ ಸ್ವಚ್ಛತೆ ಕುರಿತು ಜನಜಾಗೃತಿ ಮೂಡಿಸಲು ನವೆಂಬರ್ 4ರಿಂದ ಈ ಅಭಿಯಾನ ಆರಂಭವಾಗಲಿದೆ ಎಂದು ಪರಿಸರ ಪ್ರೇಮಿ ಮತ್ತು ಅಭಿಯಾನದ ಸಂಘಟಕ ಪ್ರೊಫೆಸರ್ ಬಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

 

Scroll to Top