ಸಿಮ್ ಕಾರ್ಡ್ ವಂಚನೆ ಪ್ರಕರಣ: ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 14. ಸಿಮ್‌ ಕಾರ್ಡ್‌ಗಳನ್ನು ಸೈಬರ್ ವಂಚಕರಿಗೆ ನೀಡುವ ಸಲುವಾಗಿ ಅವುಗಳನ್ನು ಖರೀದಿಸುತ್ತಿದ್ದ ಇಬ್ಬರನ್ನು ಮಂಗಳೂರಿನ ಸೆನ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತರನ್ನು ಮೂಲತಃ ಬೆಳ್ತಂಗಡಿಯ ಪ್ರಸಕ್ತ ನಗರದ ಮರೋಳಿ ಸಮೀಪದ ಬಜ್ಜೋಡಿಯಲ್ಲಿ ವಾಸವಾಗಿದ್ದ ಸಮದ್ ಮತ್ತು ಅಜೀಂ ಎಂದು ಗುರುತಿಸಲಾಗಿದೆ. ಏರ್‌ಟೆಲ್ ಕಂಪೆನಿಯ 86 ಸಿಮ್ ಕಾರ್ಡ್‌ಗಳು, 2 ಮೊಬೈಲ್ ಪೋನ್ ಮತ್ತು ಕಾರನ್ನು ಇವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Scroll to Top