ಮಾದಕ ದ್ರವ್ಯ ಸೇವನೆ ಆರೋಪ- ಐವರ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು,ಆ. 14. ಕಾವೂರು ಠಾಣಾ ವ್ಯಾಪ್ತಿ ಹಾಗು ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯ ವೇಳೆ ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದಡಿ ಐವರನ್ನು ಬಂಧಿಸಿದ ಕುರಿತು ವರದಿಯಾಗಿದೆ.

 

 

ಬಂಧಿತರನ್ನು ಅಮಿರುದ್ದೀನ್ (26), ಜಿಯಾದ್ (25), ಮನ್ಸೂರ್ (25), ಕಾವೂರು ಠಾಣಾ ವ್ಯಾಪ್ತಿಯ ಕೊಂಚಾಡಿಯಲ್ಲಿ ಮೂಡುಶೆಡ್ಡೆಯ ದಿವಿತ್ ಡಿ. ಶೆಟ್ಟಿ (18) ಮತ್ತು ಪಾಂಡೇಶ್ವರ ಠಾಣಾ ವ್ಯಾಪ್ತಿಯ ಪಾಂಡೇಶ್ವರ ಕಟ್ಟೆ ಬಳಿ ಮೂಲತಃ ಚಾಮರಾಜನಗರದ ಪ್ರಸಕ್ತ ಪಾಂಡೇಶ್ವರದಲ್ಲಿ ವಾಸವಾಗಿರುವ ನಾಗಶ್ರೇಯಾಸ್ (23) ಎಂಬವರನ್ನು ಬಂಧಿಸಲಾಗಿದೆ.

Scroll to Top