ಉದ್ಯಮಿ ಮನೆಯಲ್ಲಿ ಚಿನ್ನಾಭರಣ, ವಜ್ರ ಕಳ್ಳತನ…! ಮನೆಗೆಲಸದ ಮಹಿಳೆ ಸೇರಿ ಮೂವರ ಬಂಧನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.31. ಚಿನ್ನಾಭರಣ, ವಜ್ರಾಭರಣ ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿರುವ ಮಾರತ್ತಹಳ್ಳಿ ಪೊಲೀಸರು, 30 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.


ಆರೋಪಿಗಳನ್ನು ನೀಲಸಂದ್ರ ನಿವಾಸಿಗಳಾದ ದಿವ್ಯಾ(22) ಮತ್ತು ಆಕೆಯ ಚಿಕ್ಕಮ್ಮ ಮಂಜು(39) ಹಾಗೂ ಮಂಜು ಅವರ ಪರಿಚಯಸ್ಥ ಈಜಿಪುರದ ರೋಮನ್ ಎಂದು ಗುರುತಿಸಲಾಗಿದೆ.


ದಿವ್ಯಾ ಎಂಬ ಮಹಿಳೆ ಉದ್ಯಮಿ ವಿಕ್ರಮ ವೈದ್ಯನಾಥನ್ ಅವರ ನಿವಾಸದಲ್ಲಿ ಮನೆಗೆಲಸ ಮಾಡುತ್ತಿದ್ದರು. ವೈದ್ಯನಾಥನ್ ಅವರು ತಮ್ಮ ಮನೆಯಿಂದ 60 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು ಮತ್ತು ಅವರ ಮನೆಯಲ್ಲಿ ಕೆಲಸ ಮಾಡುವ ಏಳು ಜನರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!

Join the Group

Join WhatsApp Group