ಬಂಟ್ವಾಳ: ನಕಲಿ ದಾಖಲೆ ಸೃಷ್ಟಿಸಿ 70 ಲಕ್ಷಕ್ಕೂ ಅಧಿಕ ಹಣ ಬ್ಯಾಂಕಿಗೆ ವಂಚನೆ ► ಉಂಡ ಮನೆಗೇ ದ್ರೋಹ ಬಗೆದ ಬ್ಯಾಂಕ್ ಮ್ಯಾನೇಜರ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.12. ಬ್ಯಾಂಕ್ ಮ್ಯಾನೇಜರೋರ್ವರೇ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ.ಗಳನ್ನು ಸಾಲವಾಗಿ ತೆಗೆದು ವಂಚಿಸುವ ಮೂಲಕ ಉಂಡ ಮನೆಗೇ ದ್ರೋಹ ಬಗೆದ ಘಟನೆ ಬುದ್ಧಿವಂತರ ಜಿಲ್ಲೆಯಾದ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಬೆಳಕಿಗೆ ಬಂದಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಡಿಕೇಟ್ ಬ್ಯಾಂಕ್ ವಗ್ಗ ಶಾಖೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಾಖಾ ಮ್ಯಾನೇಜರ್ ತಮಿಳುನಾಡು ಮೂಲದ ಟಿ. ದುರೈ ಎಂಬಾತ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಬಂಗಾರದ ಅಡಮಾನ ಸಾಲ ಮತ್ತು ಬೇರೆಯವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಬ್ಯಾಂಕ್ ಗೆ ಸುಮಾರು 70 ಲಕ್ಷದಷ್ಟು ವಂಚಿಸಿದ್ದಾರೆ ಎಂದು ಬ್ಯಾಂಕಿನ ಈಗಿನ ಮ್ಯಾನೇಜರ್ ಆಶೀರ್ವಾದ್ ಕುಮಾರ್ ರವರು ದೂರು ನೀಡಿದ್ದಾರೆ. ದುರೈ ರನ್ನು ಈಗಾಗಲೇ ಬ್ಯಾಂಕ್ ಹುದ್ದೆಯಿಂದ ಅಮಾನತುಗೊಳಿಸಲಾಗಿದ್ದು, ತಲೆಮರೆಸಿಕೊಂಡಿದ್ದಾರೆನ್ನಲಾಗಿದೆ. ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಗೃಹಲಕ್ಷ್ಮಿ ಯೋಜನೆಗೆ ಉಚಿತ ನೋಂದಣಿಗೆ ಸರಕಾರದ ಆದೇಶ ➤ ಗ್ರಾಮ ಒನ್ ಸೇವಾ ಕೇಂದ್ರಗಳ ಸಮಸ್ಯೆ ಪರಿಹರಿಸಲು ಸರಕಾರಕ್ಕೆ ಮನವಿ

error: Content is protected !!
Scroll to Top